More

  ಮಧ್ಯಪ್ರದೇಶ ನೂತನ ಸಿಎಂ ಮೋಹನ್​ ಯಾದವ್​; ಜಗದೀಶ್ ದಿಯೋರಾ, ರಾಜೇಶ್ ಶುಕ್ಲಾ ಡಿಸಿಎಂ; ನರೇಂದ್ರ ಸಿಂಗ್ ತೋಮರ್ ಸ್ಪೀಕರ್​

  ಭೋಪಾಲ್​:  ಮೋಹನ್ ಯಾದವ್ ಅವರು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಸೋಮವಾರ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಈ ನಿರ್ಧಾರ ಹೊರಬಿದ್ದಿದೆ.

  58 ವರ್ಷದ ಮೋಹನ್ ಯಾದವ್ ಅವರು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಉಜ್ಜಯಿನಿ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾರೆ. ಹಿಂದಿನ ಸರ್ಕಾರದಲ್ಲಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು.

  ಇದಲ್ಲದೆ, ಬಿಜೆಪಿ ನಾಯಕತ್ವವು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸಲಿದೆ. ಜಗದೀಶ್ ದಿಯೋರಾ ಮತ್ತು ರಾಜೇಶ್ ಶುಕ್ಲಾ ಅವರು ಡಿಸಿಎಂ ಆಗಲಿದ್ದಾರೆ.

  ಕಳೆದ ತಿಂಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು ಕೇಂದ್ರ ಮಾಜಿ ಸಚಿವರಲ್ಲಿ ಒಬ್ಬರಾದ ಮಾಜಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ತೋಮರ್ ಅವರು ಚೌಹಾಣ್ ಅವರ ನಂತರ ಉನ್ನತ ಹುದ್ದೆ ಅಲಂಕರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

  2013 ರಲ್ಲಿ ಶಾಸಕರಾಗಿ ಮೊದಲ ಬಾರಿ ಆಯ್ಕೆಯಾಗುವುದರೊಂದಿಗೆ ಮೋಹನ್​ ಯಾದವ್​ ಅವರ ರಾಜಕೀಯ ಜೀವನವು ಪ್ರಾರಂಭವಾಯಿತು. ನಂತರದ 2018ರ ವಿಧಾನಸಭೆ ಚುನಾವಣೆಯಲ್ಲೂ ಅವರು ಮರು ಆಯ್ಕೆಯಾದರು.

  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ 2020ರ ಜುಲೈ 2ರಂದು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿ ಹೊರಹೊಮ್ಮಿದರು.

  1965ರ ಮಾರ್ಚ್ 25ರಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನಿಸಿದ ಮೋಹನ್ ಯಾದವ್, ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಒಡನಾಟ ಹೊಂದಿದ್ದಾರೆ. ಅವರು ಉದ್ಯಮಿಯಾಗಿ ಗುರುತಿಸಲ್ಪಟ್ಟಿದ್ದಾರೆ.

  ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ, ಮೋಹನ್ ಯಾದವ್ ಅವರು ಉಜ್ಜಯಿನಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೇತನ್ ಪ್ರೇಮನಾರಾಯಣ್ ಯಾದವ್ ವಿರುದ್ಧ 12,941 ಮತಗಳ ಅಂತರದಿಂದ ಗೆದ್ದಿದ್ದಾರೆ. 95,699 ಮತಗಳನ್ನು ಪಡೆಯುವ ಮೂಲಕ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಜ್ಜಯಿನಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಉಜ್ಜಯಿನಿ ದಕ್ಷಿಣ ಕ್ಷೇತ್ರವು 2003 ರಿಂದ ಬಿಜೆಪಿಯ ಭದ್ರಕೋಟೆಯಾಗಿದೆ.

  ದೇಶದ ಅತಿದೊಡ್ಡ ವಸತಿ ಹಣಕಾಸು ಕಂಪನಿಯ ಈ ಷೇರು ಕಳೆದ 9 ತಿಂಗಳಲ್ಲಿ ಶೇ. 63 ಲಾಭ ಗಳಿಸಿದೆ; ಅದಾವುದು ಗೊತ್ತೆ?

  ಲೋಕಸಭೆಯಿಂದ ಉಚ್ಚಾಟನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts