More

    ದೇಶದ ಅತಿದೊಡ್ಡ ವಸತಿ ಹಣಕಾಸು ಕಂಪನಿಯ ಈ ಷೇರು ಕಳೆದ 9 ತಿಂಗಳಲ್ಲಿ ಶೇ. 63 ಲಾಭ ಗಳಿಸಿದೆ; ಅದಾವುದು ಗೊತ್ತೆ?

    ಮುಂಬೈ: ಈ ವರ್ಷಾರಂಭದಲ್ಲಿ ಈ ಷೇರು ಖರೀದಿಸಿದವರಿಗೆ ಬಂಪರ್​ ಲಾಟರಿ ಹೊಡೆದಂತಾಗಿದೆ. ಕಳೆದ ಒಂಬತ್ತು ತಿಂಗಳಲ್ಲಿ ಈ ಷೇರು ಗಳಿಸಿರುವ ಲಾಭ ಎಷ್ಟು ಗೊತ್ತೆ? ಬರೋಬ್ಬರಿ ಶೇಕಡಾ 63. ವಾರ್ಷಿಕವಾಗಿ ಶೇಕಡಾ 84ಕ್ಕೂ ಅಧಿಕ. ಅಂದರೆ, ಈ ಷೇರಿನಲ್ಲಿ ನೂರು ರೂಪಾಯಿ ಹೂಡಿಕೆ ಮಾಡಿದ್ದರೆ, ಅದು 84 ರೂಪಾಯಿ ಲಾಭದೊಂದಿಗೆ 184 ರೂಪಾಯಿ ಆಗುವುದು.

    ಭಾರತದ ಅತಿ ದೊಡ್ಡ ವಸತಿ ಹಣಕಾಸು ಕಂಪನಿಗಳಲ್ಲಿ ಒಂದಾದ ಎಲ್​ಐಸಿ ಹೌಸಿಂಗ್ ಫೈನಾನ್ಸ್ ಕಂಪನಿಯ ಷೇರುಗಳೇ ಇಂತಹ ಅಗಾಧ ಏರಿಕೆ ಕಂಡಿದೆ. ಕಳೆದ ಒಂಬತ್ತು ತಿಂಗಳುಗಳಲ್ಲಿ ಗಮನಾರ್ಹವಾದ 63% ಆದಾಯವನ್ನು ನೀಡಿದೆ. ಈ ವರ್ಷದ ಆರಂಭಿಕ ಮೂರು ತಿಂಗಳಲ್ಲಿ ನಿಧಾನಗತಿಯ ಆರಂಭದ ನಂತರ ಮಾರ್ಚ್‌ನಲ್ಲಿ ಈ ಷೇರು ವೇಗವನ್ನು ಪಡೆದುಕೊಂಡಿತು. ಹಿಂದಿನ ವಹಿವಾಟಿನ ಅವಧಿಯಲ್ಲಿ ಇದು 5% ಏರಿಕೆ ಕಂಡಿತು. ಈ ಮೂಲಕ 544 ರೂಪಾಯಿಗೆ ತಲುಪಿ, 52 ವಾರಗಳಲ್ಲಿನ ಹೊಸ ಗರಿಷ್ಠ ಮಟ್ಟವನ್ನು ದಾಖಲಿಸಿದೆ.

    ಈ ಷೇರು ತನ್ನ ಏರುಗತಿಯನ್ನು ಹಾಗೆಯೇ ಉಳಿಸಿಕೊಳ್ಳುವ ಸಾಧ್ಯತೆ ಎಂದು ದೇಶೀಯ ಬ್ರೋಕರೇಜ್ ಸಂಸ್ಥೆ ಶೇರ್‌ಖಾನ್ ಅಭಿಪ್ರಾಯಪಟ್ಟಿದೆ.

    ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ, ಕಂಪನಿಯು ನಿವ್ವಳ ಲಾಭದಲ್ಲಿ ಅಂದಾಜು ನಾಲ್ಕು ಪಟ್ಟು ಏರಿಕೆ ಕಂಡು, . 1,188 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 305 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಈ ಕಂಪನಿಯ ಬಡ್ಡಿ ಆದಾಯವು ಪ್ರಸ್ತುತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ 6,707 ಕೋಟಿ ರೂ.ಗೆ ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 5,049 ಕೋಟಿ ರೂ. ಇತ್ತು.

    370ನೇ ವಿಧಿ ರದ್ದತಿ ಕುರಿತ ತೀರ್ಪಿನ ಮೊದಲೇ ಎಕ್ಸ್​ನಲ್ಲಿ ವಿವಾದಾತ್ಮಕ ಪೋಸ್ಟ್​: ಸೋಲುವುದಕ್ಕಾಗಿಯೇ ವಾದ ಮಂಡಿಸಿದ್ದರೆ ಕಪಿಲ್​ ಸಿಬಲ್​?

    ಲೋಕಸಭೆಯಿಂದ ಉಚ್ಚಾಟನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts