More

    ಮಧ್ಯಪ್ರದೇಶದ ಸಿಎಂ ಯಾರು? ಭೋಪಾಲ್​ನಲ್ಲಿ ಶಾಸಕರ ಸಭೆ ನಡೆಸುತ್ತಿದ್ದಾರೆ ಕೇಂದ್ರ ವೀಕ್ಷಕರು

    ಭೋಪಾಲ್: ನೂತನವಾಗಿ ಆಯ್ಕೆಯಾದ ಪಕ್ಷದ ಶಾಸಕರ ಸಭೆಯಲ್ಲಿ ಭಾಗವಹಿಸಲು ಮತ್ತು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಲು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿ ಬಿಜೆಪಿಯ ಮೂವರು ಕೇಂದ್ರ ವೀಕ್ಷಕರು ಸೋಮವಾರ ಭೋಪಾಲ್ ತಲುಪಿದ್ದಾರೆ.

    ಖಟ್ಟರ್ ಜತೆಗೆ, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರಾ ಅವರು ವಿಶೇಷ ವಿಮಾನದ ಮೂಲಕ ಬೆಳಗ್ಗೆ 11.30 ರ ಸುಮಾರಿಗೆ ಭೋಪಾಲ್ ತಲುಪಿದ್ದಾರೆ.

    ಪಕ್ಷದ ರಾಜ್ಯ ಮುಖ್ಯಸ್ಥ ವಿಡಿ ಶರ್ಮಾ ಮತ್ತು ಇತರ ನಾಯಕರು ಭೋಪಾಲ್ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದರು. ವಿಮಾನ ನಿಲ್ದಾಣದಿಂeaದ ಮೂವರು ವೀಕ್ಷಕರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ತೆರಳಿದರು.

    ಶಾಸಕರಿಗೆ ನೀಡಿರುವ ವೇಳಾಪಟ್ಟಿಯ ಪ್ರಕಾರ ಸೋಮವಾರ ಸಂಜೆ 4 ಗಂಟೆಗೆ ಸಭೆ ಆರಂಭವಾಗಿದ್ದು, ಸಂಜೆಯ ಹೊತ್ತಿಗೆ ಮುಖ್ಯಮಂತ್ರಿ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

    ಹಾಲಿ ಸಿಎಂ ಶಿವರಾಜ್‌ ಚೌಹಾಣ್​, ಜ್ಯೋತಿರಾದಿತ್ಯ ಸಿಂಧಿಯಾ, ಕೈಲಾಶ್ ವಿಜಯವರ್ಗಿಯ, ಜ್ಯೋತಿರಾದಿತ್ಯ ಸಿಂಧಿಯಾ, ಪ್ರಹ್ಲಾದ್ ಪಟೇಲ್ ಮತ್ತು ವಿಡಿ ಶರ್ಮಾ ಅವರ ಹೆಸರುಗಳು ಮುಖ್ಯಮಂತ್ರಿ ರೇಸ್‌ನಲ್ಲಿವೆ.

    ಎರಡು ದಶಕಗಳಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಐದನೇ ಬಾರಿಗೆ ಸರ್ಕಾರ ರಚಿಸಲಿದೆ. ಈ ಹಿಂದೆ 2003, 2008, 2013 ಮತ್ತು 2020ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ನ. 17ರ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ, 230 ಸದಸ್ಯ ಬಲದ ವಿಧಾನಸಭೆಯಲ್ಲಿ 163 ಸ್ಥಾನಗಳನ್ನು ಕೇಸರಿ ಪಕ್ಷ ಗೆದ್ದಿದೆ. ಕಾಂಗ್ರೆಸ್ 66 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ.

    370ನೇ ವಿಧಿ ರದ್ದತಿ ಕುರಿತ ತೀರ್ಪಿನ ಮೊದಲೇ ಎಕ್ಸ್​ನಲ್ಲಿ ವಿವಾದಾತ್ಮಕ ಪೋಸ್ಟ್​: ಸೋಲುವುದಕ್ಕಾಗಿಯೇ ವಾದ ಮಂಡಿಸಿದ್ದರೆ ಕಪಿಲ್​ ಸಿಬಲ್​?

    ಲೋಕಸಭೆಯಿಂದ ಉಚ್ಚಾಟನೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

    ದೇಶದ ಅತಿದೊಡ್ಡ ವಸತಿ ಹಣಕಾಸು ಕಂಪನಿಯ ಈ ಷೇರು ಕಳೆದ 9 ತಿಂಗಳಲ್ಲಿ ಶೇ. 63 ಲಾಭ ಗಳಿಸಿದೆ; ಅದಾವುದು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts