

ನವದೆಹಲಿ: ಒಂದೆಡೆ ಕರೊನಾ ಸೋಂಕು ಹಿಡಿತಕ್ಕೆ ಸಿಗದ ರೀತಿಯಲ್ಲಿ ವ್ಯಾಪಿಸುತ್ತಿದ್ದರೆ ಮತ್ತೊಂದೆಡೆ ಇನ್ನೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಭವಿಷ್ಯದಲ್ಲಿ ಮತ್ತಷ್ಟು ರೂಪಾಂತರಗೊಂಡ ವೈರಸ್ ಕಾಡುವ ಸಾಧ್ಯತೆ ಇದೆಯಂತೆ.
ಕೋವಿಡ್-19 ವೈರಸ್ ರೂಪಾಂತರಗೊಳ್ಳುತ್ತ ಬಂದಿದ್ದು, ಅದೀಗ ಸದ್ಯಕ್ಕೆ ಒಮಿಕ್ರಾನ್ ವರೆಗೆ ಬಂದು ತಲುಪಿದೆ. ಆದರೆ ಈ ರೂಪಾಂತರ ಇಲ್ಲಿಗೇ ಮುಗಿಯುವುದಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
ಒಮಿಕ್ರಾನ್ಗೇ ಕೋವಿಡ್ ಕಾಟ ಮುಗಿಯುವುದಿಲ್ಲ. ಏಕೆಂದರೆ ಒಮಿಕ್ರಾನ್ ರೂಪಾಂತರ ಕೊನೆಯದಲ್ಲ. ಭವಿಷ್ಯದಲ್ಲಿ ಮತ್ತಷ್ಟು ರೂಪಾಂತರಗೊಂಡ ವೈರಸ್ಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ತಂಡದ ಮರಿಯಾ ವಾನ್ ಕೆರ್ಖೊವ್ ಅಭಿಪ್ರಾಯಪಟ್ಟಿದ್ದಾರೆ. -ಏಜೆನ್ಸೀಸ್