ಶಿವಲಿಂಗಕ್ಕೆ ಜಲಾಭಿಷೇಕದ ಹರಕೆ ತೀರಿಸಿದ ಒಲಿಂಪಿಕ್ಸ್ ರಜತ ವಿಜೇತ ಪೈಲ್ವಾನ್!

ravi web
Published on

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ರಜತ ವಿಜೇತ ಪೈಲ್ವಾನ್ ರವಿ ಕುಮಾರ್ ದಹಿಯಾ ಹರಿದ್ವಾರದ ಮಹಾದೇವ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕೊಡದಲ್ಲಿ ಬೆಟ್ಟಕ್ಕೆ ನೀರು ತೆಗೆದುಕೊಂಡು ಹೋಗಿ ಜಲಾಭಿಷೇಕದ ಹರಕೆಯನ್ನೂ ತೀರಿಸಿದರು.

ಕೇಸರಿ ಪಂಚೆ ಧರಿಸಿ ನೀರು ತುಂಬಿದ ಕೊಡವನ್ನು ಎತ್ತಿಕೊಂಡು ಕುಸ್ತಿಪಟು ರವಿ ದಹಿಯಾ ಸಾಗಿರುವ ಮತ್ತು ಶಿವಲಿಂಗಕ್ಕೆ ನೀರು ಎರೆದಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ‘ಬಾಹುಬಲಿಯ ಸ್ಟೈಲ್’ನಲ್ಲಿ ರವಿ ದಹಿಯಾ ಕಾಣಿಸಿಕೊಂಡಿರುವುದಕ್ಕೆ ವಿಶೇಷ ಮೆಚ್ಚುಗೆಗಳು ವ್ಯಕ್ತವಾಗಿವೆ. ಜತೆಗೆ ಇವರೇ ನಿಜವಾದ ಬಾಹುಬಲಿ ಎಂದು ಹೊಗಳಿಕೆಗಳೂ ಬಂದಿವೆ.

ಒಲಿಂಪಿಕ್ಸ್ ಪದಕ ಗೆಲುವಿಗಾಗಿ ರವಿ ದಹಿಯಾ, ಶಿವಲಿಂಗಕ್ಕೆ ಜಲಾಭಿಷೇಕ ಮಾಡುವ ಹರಕೆ ಹೊತ್ತುಕೊಂಡಿದ್ದರು ಎನ್ನಲಾಗಿದೆ. ಸೆಲೆಬ್ರಿಟಿಯೊಬ್ಬರು ಈ ರೀತಿಯಾಗಿ ಬಹಿರಂಗವಾಗಿ ಹಿಂದು ಸಂಸ್ಕೃತಿಯನ್ನು ಪ್ರದರ್ಶಿಸಿರುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಎಲ್ಲರಿಗೂ 23 ವರ್ಷದ ರವಿ ದಹಿಯಾ ಅವರ ನಡೆ ಮಾದರಿಯಾಗಿದೆ ಎನ್ನಲಾಗುತ್ತಿದೆ. ರವಿ ದಹಿಯಾ ಇತ್ತೀಚೆಗೆ ಸಹೋದರಿಯರ ಜತೆಗೆ ರಕ್ಷಾ ಬಂಧನ ಹಬ್ಬದ ಸಂಭ್ರಮವನ್ನೂ ಆಚರಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net