ನಿರ್ಮಾಪಕನೊಂದಿಗೆ ಮಂಚ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿ ಕಣ್ಣೀರಿಡುತ್ತಿರುವ ನಟಿ!

Sheethal Pathra
Published on

ಭುವನೇಶ್ವರ: ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ನಿರ್ಮಾಪಕರೊಬ್ಬರು ಬೆದರಿಕೆ ಹಾಕುತ್ತಿದ್ದಾರೆ ಎಂದು ಒಡಿಶಾ ನಟಿ ಶೀತಲ್​ ಪಾತ್ರ ಗಂಭೀರ ಆರೋಪ ಮಾಡಿದ್ದಾರೆ.

ಲೈಂಗಿಕ, ಮಾನಸಿಕ ಕಿರುಕುಳ 

ನಿರ್ಮಾಪಕ ಮತ್ತು ದಯಾನಿಧಿ ಎಂಟರ್‌ಟೈನ್‌ಮೆಂಟ್‌ನ ಮಾಲೀಕ ದಯಾನಿಧಿ ದಹಿಮಾ ಅವರು ತನಗೆ ಲೈಂಗಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಒಡಿಶಾ ರಾಜಧಾನಿ ಭುವನೇಶ್ವರದ ಲಕ್ಷ್ಮೀಸಾಗರ ಠಾಣಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಟಿ ಶೀತಲ್​ ಆರೋಪಿಸಿದ್ದಾರೆ. ತನ್ನ ತಾಯಿ ಮತ್ತು ಸಹೋದರನಿಗೂ ನಿರ್ಮಾಪಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಶೀತಲ್​ ಉಲ್ಲೇಖಿಸಿದ್ದಾರೆ.

ಸರಸ ಸಲ್ಲಾಪದ ಕ್ಷಣ

Dayanidhia Dahima
ಆರೋಪಿ ದಯಾನಿಧಿ ಧಹಿಮಾ

ಶೀತಲ್​ 2019 ರಲ್ಲಿ ಆರೋಪಿ ದಯಾನಿಧಿಯೊಂದಿಗೆ ಸಂಬಂಧದಲ್ಲಿದ್ದಳು. ಈ ವೇಳೆ ದಯಾನಿಧಿ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ ಕ್ಷಣಗಳನ್ನು ರಹಸ್ಯವಾಗಿ ಸೆರೆಹಿಡಿಯಲಾಗಿದೆ. ಅದಕ್ಕೆ ಸಂಬಂಧಿಸಿದ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್ ಮಾಡಲು ಪ್ರಾರಂಭಿಸಿದನು ಮತ್ತು ಫೋಟೋಗಳನ್ನು ಆಕೆಯ ತಾಯಿ ಮತ್ತು ಪರಿಚಯಸ್ಥರಿಗೂ ದಯಾನಿಧಿ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಾನು ಪಡೆದ ಎಲ್ಲ ಸಂಭಾವನೆಗಳನ್ನು ಹಿಂದಿರುಗಿಸಬೇಕೆಂದು ದಯಾನಿಧಿ ಒತ್ತಾಯಿಸುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಹಣವನ್ನು ಹಿಂದಿರುಗಿಸದಿದ್ದರೆ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದಾಗಿ ದಯಾನಿಧಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಆಕ್ಷೇಪಾರ್ಹ ಪೋಸ್ಟ್‌

ಕಾಲೇಜಿನಲ್ಲಿ ಇತರ ವಿದ್ಯಾರ್ಥಿಗಳ ಮುಂದೆ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದಲ್ಲದೆ, ಹಲ್ಲೆ ನಡೆಸಿದ್ದಾನೆ. ಈ ಸಮಯದಲ್ಲಿ ನನ್ನ ಸಮವಸ್ತ್ರವನ್ನು ಹರಿದು ಹಾಕಿದನು. ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಬಗ್ಗೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಯಾನಿಧಿ, ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಪೋಸ್ಟ್‌ಗಳೊಂದಿಗೆ ಅವಮಾನಿಸಿದ್ದಾರೆ ಎಂದು ಶೀತಲ್​ ಆರೋಪಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಸುಳ್ಳು ಮಾಹಿತಿಗಳನ್ನು ಹರಡಿದ ಆರೋಪವೂ ದಯಾನಿಧಿ ಮೇಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net