

ಬೆಂಗಳೂರು: ಬಾಣಸವಾಡಿಯಲ್ಲಿ ಸೆ.2ರಂದು ನಡೆದಿದ್ದ ಹಾಡಹಗಲೇ ವೃದ್ಧೆಯೊಬ್ಬರ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಅವರು ಬಾಯ್ಬಿಟ್ಟ ಸತ್ಯ ಬೆಚ್ಚಿಬೀಳಿಸುವಂತಿದೆ.
ವೃದ್ಧೆ ಕಾಂತಮ್ಮ (70) ಕೊಲೆಯಾದವರು. ರಾಮಸ್ವಾಮಿಪಾಳ್ಯ ನಿವಾಸಿ ಜಾನ್ ಜೋಸೆಫ್ (75) ಮತ್ತು ಈತನ ಪುತ್ರಿ ಮಲಿರ್ನ್ (48) ಬಂಧಿತರು. ತಂದೆ-ಮಗಳು ಇಬ್ಬರೂ ಸೇರಿಕೊಂಡು ವೃದ್ಧೆಯನ್ನು ಹಾಡಹಗಲೇ ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿರಿ ಅಕ್ರಮವಾಗಿ ಮರಳು ತೆಗೆಯಲು ಅಪ್ಪನ ಜತೆ ಹೋಗಿದ್ದ ಯುವತಿ ಅಲ್ಲೇ ಪ್ರಾಣಬಿಟ್ಟಳು!
ತಮಿಳುನಾಡು ಮೂಲದ ಜಾನ್ ಜೋಸೆಫ್ ಬೆಂಗಳೂರಿನಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈತನ ಪುತ್ರಿ ಮಲಿರ್ನ್ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಮಸ್ವಾಮಿಪಾಳ್ಯದ ಕಾಂತಮ್ಮ ಅವರ ಮನೆಯಲ್ಲಿ ಇವರಿಬ್ಬರೂ ಬಾಡಿಗೆಗೆ ಇದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಜೋಸೆಫ್ ಚಿಕಿತ್ಸೆಗಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಅಲ್ಲದೆ, ಲಾಕ್ಡೌನ್ ವೇಳೆ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಸಾಲ ತೀರಿಸುಂವತೆ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು.
ವೃದ್ಧೆ ಕಾಂತಮ್ಮನ ಪುತ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದ. ಮಾನಸಿಕ ಅಸ್ವಸ್ಥ ಪುತ್ರಿ ಕಾಂತಮ್ಮ ಜತೆ ನೆಲೆಸಿದ್ದಳು. ಕಾಂತಮ್ಮ ಮನೆ ಬಾಡಿಗೆ ಹಣವನ್ನು ತಾನೇ ಸಂಗ್ರಹಿಸುತ್ತಿದ್ದಳು. ಆಕೆ ಬಳಿ ಹಣ ಮತ್ತು ಚಿನ್ನಾಭರಣ ಇರುವ ಬಗ್ಗೆ ಜೋಸೆಫ್ಗೆ ಗೊತ್ತಾಗಿತ್ತು. ಮನೆಯಲ್ಲಿ ದರೋಡೆ ಮಾಡುವ ಬಗ್ಗೆ ಸೆ.1ರ ರಾತ್ರಿ ಪುತ್ರಿ ಮಲಿರ್ನ್ ಜತೆ ಸಂಚು ರೂಪಿಸಿದ್ದ.
ಇದನ್ನೂ ಓದಿರಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳು!
ಕಾಂತಮ್ಮ ಸೆ.2ರ ಬೆಳಗ್ಗೆ 10 ಗಂಟೆಯಲ್ಲಿ ಪುತ್ರಿ ಮಂಜುಳಾ ಜತೆ ಮನೆಯಲ್ಲಿದ್ದರು. ಮಂಜುಳಾಗೆ ಆಧಾರ್ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿದ್ದ ಮಲಿರ್ನ್, ಮನೆಯಿಂದ ಆಕೆಯನ್ನು ಹೊರಗೆ ಕರೆದೊಯ್ದಿದ್ದಳು. ಇದೇ ವೇಳೆ ಮನೆಗೆ ನುಗ್ಗಿದ್ದ ಜೋಸೆಫ್, ಕಾಂತಮ್ಮರ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಬಳಿಕ ಮರ್ಲಿನ್ಳನ್ನು ಕರೆಸಿಕೊಂಡು ವೃದ್ಧೆಯ ಮೈಮೇಲಿದ್ದ 50 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಮನೆಯ ಸುತ್ತಮುತ್ತಲಿನ ರಸ್ತೆಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ, ವೃದ್ಧೆಯ ಪುತ್ರಿಯನ್ನು ಮಲಿರ್ನ್ ಹೊರಗೆ ಕರೆದೊಯ್ದಿರುವುದು ಹಾಗೂ ಜೋಸೆಫ್ ಅನುಮಾನಾಸ್ಪದವಾಗಿ ಹೋಗಿರುವ ದೃಶ್ಯ ಕಂಡು ಬಂದಿತ್ತು. ಅವರಿಬ್ಬರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ. ತಪ್ಪೊಪ್ಪಿಕೊಂಡಿದ್ದಾರೆ. ದರೋಡೆ ಮಾಡಿದ್ದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.