

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಗೆ ಸಿಐಡಿಯ ಉತ್ತಮ ಅಧಿಕಾರಿಗಳನ್ನೇ ನೇಮಕ ಮಾಡಿದ್ದೇನೆ,ಪ್ರಕರಣದಲ್ಲಿ ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಈಗಾಗಲೇ 47 ಜನರನ್ನು ಬಂಧಿಸಲಾಗಿದೆ.ಈ ಭಾಗದ ಕೆಲವು ಅಭ್ಯರ್ಥಿಗಳು ಓಎಂಆರ್ ಶೀಟ್ ನನ್ನ ಗಮನಕ್ಕೆ ಬಂದ ಕೂಡಲೇ ಖುದ್ದಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದಿದ್ದಾರೆ.
ದೈಹಿಕ ಪರೀಕ್ಷೆ ಯಲ್ಲಿ ಅಕ್ರಮ ನಡೆದಿಲ್ಲ.ಸಂಪೂರ್ಣ ತನಿಖೆ ಮುಗಿದ ಬಳಿಕವೇ ಪಿಎಸ್ ಐ ನೇಮಕಾತಿ ಮರುಪರೀಕ್ಷೆ ನಡೆಸಲಾಗುವುದು ಎಂದರು.
ನಮ್ಮ ಉದ್ದೇಶ ನಾನು ಒಬ್ಬ ಹೋಮ್ ಮಿನಿಸ್ಟರ್ ಆದರೂ ನನ್ನ ಅಕ್ಕನ ಮಗಳಿಗೆ ಏನೂ ಸಹಾಯ ಮಾಡಿಲ್ಲ, ನಾನು ಪ್ರಾಮಾಣಿಕವಾಗಿ ಬದುಕಿದ್ದೇನೆ. ನಮ್ಮ ಸಂಬಂಧಿಕರಿಗೂ ಸಹಕಾರ ಮಾಡಿಲ್ಲ ಎಂದು ಹೇಳಿದರು.
ಈ ಹಿಂದೆ ಪಿಎಸ್ ಐ ನೇಮಕಾತಿ ಯಲ್ಲಿ ಅಕ್ರಮ ಆಗಿರಬಹುದು ಆದರೆ ಯಾರು ತನಿಖೆ ನಡೆಸಿಲ್ಲ ಕ್ರಮ ಕೈಗೊಂಡಿಲ್ಲ ನಾವು ಮಾತ್ರ ಸಂಪೂರ್ಣ ಅಕ್ರಮದ ತನಿಖೆ ಮಾಡುತ್ತಿದ್ದೇವೆ ಎಂದರು.