ವಿಷ್ಣು ಸಮುದ್ರ ಕೆರೆಗೆ ಬಾಗಿನ ಅರ್ಪಣೆ

4blrp1
-ಪಟ್ಟಣ ಸಮೀಪದ(ವಿಷ್ಣು ಸಮುದ್ರ)ಬಿಷ್ಟಮ್ಮನ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಿಟ್ರುವಳ್ಳಿ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸುತ್ತಿರುವುದು
Published on

ಬೇಲೂರು: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸಮೀಪದ ಬಿಷ್ಟಮ್ಮನ ಕೆರೆ (ವಿಷ್ಣು ಸಮುದ್ರ) ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಬಿಟ್ರುವಳ್ಳಿ ಗ್ರಾಮಸ್ಥರು ಕೆರೆ ಸಮೀಪ ಇರುವ ಬಿಷ್ಟಮ್ಮ ದೇವರ ಗದ್ದುಗೆಗೆ ಪೂಜೆ ಸಲ್ಲಿಸಿ ಸೋಮವಾರ ಕೆರೆಗೆ ಬಾಗಿನ ಅರ್ಪಿಸಿದರು.

ಬಿಟ್ರುವಳ್ಳಿ ಗ್ರಾಮದ ಬಿಷ್ಟಮ್ಮ ಟ್ರಸ್ಟ್ ಮುಖಂಡ ಬಿಟ್ರುವಳ್ಳಿ ಉಮೇಶ್ ಮಾತನಾಡಿ, ಇಲ್ಲಿನ ಕೆರೆ ದಡದಲ್ಲಿ ಬಿಷ್ಟಮ್ಮನ ಗದ್ದುಗೆ ಇದ್ದು, ಪ್ರತಿವರ್ಷ ಬಿಷ್ಟಮ್ಮ ಟ್ರಸ್ಟ್ ಹಾಗೂ ಗ್ರಾಮಸ್ಥರು ಸೇರಿ ಜಾತ್ರ ಮಹೋತ್ಸವ ನೆರವೇರಿಸುತ್ತೇವೆ. ಬಿಷ್ಟಮ್ಮ ಗ್ರಾಮ ದೇವತೆಯಾಗಿ ಎಲ್ಲರಿಗೂ ಹರಸಿ ಸಮೃದ್ಧಿಯಾದ ಬೆಳೆ ಬರುವುದಕ್ಕೆ ನೀರುಣಿಸುತ್ತಾಳೆ. ಅಲ್ಲದೆ ಈ ಕೆರೆ ತುಂಬಿದರೆ ಹತ್ತಾರು ಗ್ರಾಮಗಳ ರೈತರಿಗೆ ಅನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಷ್ಟಮ್ಮನಿಗೆ ಪೂಜೆ ಸಲ್ಲಿಸಿ ಪ್ರತಿ ವರ್ಷದಂತೆ ಕೆರೆ ತುಂಬಿದ ಕಾರಣ ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸುತಿದ್ದೇವೆ ಎಂದರು.

ಗ್ರಾಮಸ್ಥರಾದ ಅಣ್ಣೇಗೌಡ, ಶಾಂತೇಗೌಡ, ಚಂದ್ರಶೇಖರ್, ಅರ್ಚಕ ಅಣ್ಣೇಗೌಡ, ಸುರೆಶ್, ವಸಂತ್, ಸಣ್ಣಮ್ಮ, ಮೀನಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net