ಅಬ್ಬಾ! ಶಾರ್ಕ್‌ ಬಾಯಿಯಲ್ಲಿರುತ್ತಿದ್ದ ಬಾಲಕ ಬಚಾವ್‌: ವಿಡಿಯೋ ವೈರಲ್‌

shark
Published on

ಫ್ಲೊರಿಡಾ: ಆಯಸ್ಸು ಗಟ್ಟಿಯಾಗಿದ್ದರೆ ಹೇಗಾದರೂ ಬಚಾವಾಗುತ್ತಾರೆ ಎನ್ನುವುದು ತೀರಾ ಹಳೆಯ ಮಾತು. ಅಂಥದ್ದೇ ಒಂದು ಘಟನೆ ಫ್ಲೊರಿಡಾದಲ್ಲಿ ನಡೆದಿದೆ.

ಇಲ್ಲಿಯ ಒರ್ಲಾಂಡೊ ಬೀಚ್​​ನಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನನ್ನು ಶಾರ್ಕ್‌ ಬಾಯಿಯಿಂದ ಅಧಿಕಾರಿಯೊಬ್ಬರು ಬಚಾವು ಮಾಡಿದ್ದಾರೆ. ಶಾರ್ಕ್‌ ಎಂದರೆ ಕೇಳಬೇಕೆ? ಛಂಗನೆ ಬಂದು ಕಣ್ಣುಮುಚ್ಚಿ ತೆರೆಯುವುದರೊಳಗೆ ನುಂಗಿ ಹಾಕಿಬಿಡುತ್ತದೆ.

ಆದರೆ ಆಡ್ರಿಯಾನ್​ ಕೋಸಿಕಿ ಎಂಬುವವರ ಸಮಯಪ್ರಜ್ಞೆಯಿಂದ ಬಾಲಕನಿಗೆ ಮರುಜೀವ ಸಿಕ್ಕಿದೆ. ಬೋಗಿ ಬೋರ್ಡ್​ ಎಂಬ ಬಾಲಕ ನೀರಿನಲ್ಲಿ ಆಟವಾಡುತ್ತಿದ್ದರೆ, ಆಡ್ರಿಯಾನ್​ ಕೋಸಿಕಿ ಎನ್ನುವವರು ತಮ್ಮ ಪತ್ನಿಯ ಜತೆ ಸಮುದ್ರದ ದಡದಲ್ಲಿದ್ದರು. ಅವರ ಗಮನ ಬಾಲಕನ ಮೇಲೆ ಹೋಗಿದೆ. ಅದೇ ವೇಳೆ ಅತ್ತ ಕಡೆಯಿಂದ ಭಯಾನಕ ಶಾರ್ಕ್‌ ಧಾವಿಸಿ ಬರುತ್ತಿರುವುದನ್ನು ಅವರು ನೋಡಿದ್ದಾರೆ. ತಕ್ಷಣವೇ ನೀರಿನಲ್ಲಿ ಈಜಿ ಬಾಲಕನನ್ನು ಕಾಪಾಡಿದದ್ದಾರೆ.

ಅಲ್ಲಿಯೇ ಇರುವವರು ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅಮೆರಿಕದ ಕೋಸಕಿ ಅವರ ಧೈರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net