ಪುತ್ತೂರು: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಹನುಮೋತ್ಸವದ ಅಂಗವಾಗಿ ಏ.೧೭ರಿಂದ ೨೩ರವರೆಗೆ ಅಖಂಡ ಭಗವನ್ನಾಮ ಸಂಕೀರ್ತನೆ ನಡೆಯಲಿದೆ.
ಏ.೧೭ರಂದು ಪ್ರಾತಃಕಾಲ ದೀಪಾರಾಧನೆ, ಭಗವನ್ನಾಮಸಂಕೀರ್ತನೆ ಪ್ರಾರಂಭವಾಗಲಿದ್ದು, ಏ.೨೩ರಂದು ಪ್ರಾತಃಕಾಲ ಭಗವನ್ನಾಮಸಂಕೀರ್ತನೆ ಮಂಗಲ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಬೆಳಗ್ಗೆ ೯ರಿಂದ ಶ್ರೀಮದ್ರಾಮಾಯಣ ಮಹಾಯಜ್ಞ ಪ್ರಾರಂಭ, ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗ ತಂಬಿಲ, ೧೧.೩೦ರಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ಧರ್ಮ ಸಂದೇಶ, ೧೨ರಿಂದ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ ೨.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೭ರಿಂದ ಶ್ರೀಹನುಮದ್ವ್ರತ ಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಲಿದೆ.