ಒಡಿಶಾ ವಿದ್ಯಾರ್ಥಿನಿ ಸಜೀವ ದಹನ ಪ್ರಕರಣ: ಸಮಿತಿಯ ಶಿಫಾರಸು ನಿರ್ಲಕ್ಷಿಸಿದ್ದೇ ದುರಂತಕ್ಕೆ ಕಾರಣ! Student Death

Student Death
Published on

Student Death : ತಮ್ಮ ಕಾಲೇಜಿನ ವಿಭಾಗದ ಮುಖ್ಯಸ್ಥರ ಲೈಂಗಿಕ ಕಿರುಕುಳವನ್ನು ಸಹಿಸಲಾರದೇ 20 ವರ್ಷದ ಬಿ.ಎಡ್. ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಪ್ರಕರಣ ಒಡಿಶಾದಲ್ಲಿ ಆಕ್ರೋಶದ ಕಿಡಿಯನ್ನು ಹೊತ್ತಿಸಿದೆ.

ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಸೋರ್‌ನಲ್ಲಿರುವ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ದಿಲ್ಲಿಪ್ ಘೋಷ್ ನೇತೃತ್ವದ ಕಾಲೇಜು ಆಡಳಿತ ಮಂಡಳಿಗೆ ಈ ಮೊದಲೇ ದೂರು ನೀಡಿದರು ಕೂಡ ಆರೋಪಿ ಸಮೀರ್ ರಂಜನ್ ಸಾಹೂ ( ವಿಭಾಗದ ಮುಖ್ಯಸ್ಥ) ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ ಅಮಾಕಯಕ ವಿದ್ಯಾರ್ಥಿನಿಯ ಸಾವು ವ್ಯಾಪಕ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಾಹೂ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪದೇಪದೆ ಪೀಡಿಸುತ್ತಿದ್ದರ ಬಗ್ಗೆ ಕಾಲೇಜಿನ ಆಂತರಿಕ ದೂರು ಸಮಿತಿಗೆ (ಐಸಿಸಿ) ವಿದ್ಯಾರ್ಥಿನಿ ಔಪಚಾರಿಕ ದೂರು ನೀಡಿದ ನಂತರ ಈ ಕೃತ್ಯ ಬಯಲಾಗಿದೆ.

ಐಸಿಸಿ ಸದಸ್ಯೆ ಮೀನತಿ ಸೇಥಿ ಆರೋಪವನ್ನು ದೃಢಪಡಿಸಿದ್ದು, ಆದರೆ ಘಟನೆಯ ಕುರಿತಂತೆ ಯಾವುದೇ ರೀತಿ ನೇರ ಪುರಾವೆಗಳು ಕಂಡುಬಂದಿಲ್ಲ ಎನ್ನುವುದನ್ನು ಉಲ್ಲೇಖಿಸಿದ್ದರು. ಸಾಹೂ ಅವರ ನಡವಳಿಕೆ ಬಗ್ಗೆ ತನಿಖೆ ಮಾಡಲು ಸಮಿತಿಯು ಇಲಾಖೆಯ ವತಿಯಿಂದ ಸುಮಾರು 60 ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಲಾಗಿದ್ದು, ಬೇರೆ ಯಾವುದೇ ವಿದ್ಯಾರ್ಥಿನಿಯರು ವಿಭಾಗದ ಮುಖ್ಯಸ್ಥರ ಮೇಲೆ ಇಂತಹ ಆರೋಪವನ್ನು ಮಾಡಿಲ್ಲ ಎಂದಿದ್ದಾರೆ.

ಸಾಕ್ಷ್ಯಗಳ ಕೊರತೆಯ ಹೊರತಾಗಿಯೂ, ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಐಸಿಸಿ ಸಾಹೂ ಅವರನ್ನು ಅವರ ಎಚ್‌ಒಡಿ ಸ್ಥಾನದಿಂದ ತಕ್ಷಣ ವರ್ಗಾಯಿಸಲು ಶಿಫಾರಸು ಮಾಡಿತ್ತು. ಜುಲೈ 9 ರಂದು ಸಮಿತಿಯು, ಪ್ರಿನ್ಸಿಪಾಲ್ ಘೋಷ್ ಅವರಿಗೆ ವಿವರವಾದ ವರದಿಯನ್ನು ಸಲ್ಲಿಸಿತ್ತು. ಇದರ ಜೊತೆಗೆ ತ್ವರಿತ ಕ್ರಮಕ್ಕೆ ಒತ್ತಾಯಿಸುವ ಔಪಚಾರಿಕ ಪತ್ರ ಮತ್ತು ಮೌಖಿಕ ಶಿಫಾರಸುಗಳನ್ನು ಮಾಡಿತ್ತು.

ಆದರೆ, ಸಮಿತಿಯ ವರದಿ ಕೇವಲ ಸಲ್ಲಿಕೆಗೆ ಮಾತ್ರ ಸೀಮಿತವಾಗಿದೆ. ಈ ವಿಚಾರದಲ್ಲಿ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಕಾಲೇಜು ಆಡಳಿತ ಮಂಡಳಿಯ ನಿಷ್ಕ್ರಿಯತೆ ಸಾಬೀತಾಗಿದ್ದು, ಪ್ರಾಂಶುಪಾಲ ಘೋಷ್ ಐಸಿಸಿಯ ಶಿಫಾರಸುಗಳನ್ನು ನಿರ್ಲಕ್ಷಿಸಿ, ವಿಭಾಗದ ಮುಖ್ಯಸ್ಥ ಸಾಹೂ ಅವರನ್ನು ರಕ್ಷಿಸಿ ಮರುನೇಮಕ ಮಾಡಿಕೊಂಡಿದ್ದರು ಎನ್ನಲಾಗಿದೆ.( ಏಜೆನ್ಸೀಸ್ )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net