ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!

Bride
Published on

ಭುವನೇಶ್ವರ್​: ಯಾವುದೇ ಮದುವೆಯಾಗಲಿ ಅಲ್ಲಿ ವರನ ಎಂಟ್ರಿಗಿಂತ ವಧುವಿನ ಆಗಮನ ಅದ್ಧೂರಿಯಾಗಿರುತ್ತದೆ. ಹೀಗಾಗಿ ಅನೇಕ ವಧುಗಳು ತಮ್ಮ ಎಂಟ್ರಿ ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ. ಅದೇ ರೀತಿಯಲ್ಲಿ ಒಡಿಶಾದ ವಧುವೊಬ್ಬಳು ಮದುವೆ ಮಂಟಪಕ್ಕೆ ವಿಭಿನ್ನವಾಗಿ ಎಂಟ್ರಿ ಕೊಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ.

ಫೆ. 21ರಂದು ನಡೆದ ಸಾಗರಿಕ ಬೆಹೆರಾ ಮದುವೆ ತುಂಬಾ ವಿಶೇಷ ಎನಿಸಿಕೊಂಡಿತು. ಹಳೇ ಪದ್ಧತಿಯನ್ನು ಮೂಲೆ ತಳ್ಳಿ ಅದ್ಧೂರಿ ಅಲಂಕಾರದೊಂದಿಗೆ ಕಾರನ್ನೇರಿದ ವಧು, ಸ್ವತಃ ತಾನೇ ಡ್ರೈವ್​ ಮಾಡಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಳು. ಈ ವಿಶೇಷ ಸಂದರ್ಭ ಭುವನೇಶ್ವರ ಖಾರಬೆಲಾ ನಗರದಲ್ಲಿ ನಡೆದಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಸಾಗರಿಕ, ಬುಧವಾರ ಮೇಕಪ್​ ಮಾಡಿಸಿಕೊಳ್ಳಲು ನಾನು ಸಲೂನ್​ಗೆ ಹೋಗಬೇಕಿತ್ತು. ಆದರೆ, ನನ್ನ ಇಡೀ ಕುಟುಂಬ ಸದಸ್ಯರು ಮದುವೆ ತಯಾರಿಯಲ್ಲಿದ್ದರು. ಹೀಗಾಗಿ ಯಾರನ್ನು ಕೇಳದೆ ಕೆಲ ಸೋದರಸಂಬಂಧಿಯ ಜತೆ ಕಾರಿನಲ್ಲಿ ಸಲೂನ್​ಗೆ ತೆರಳಿದೆ. ಮೇಕಪ್​ ಮುಗಿದ ಬಳಿಕ ನೇರವಾಗಿ ಮಂಟಪಕ್ಕೆ ತೆರಳಿದೆ. ಸೋದರ ಸಂಬಂಧಿಗೆ ಡ್ರೈವಿಂಗ್​ ತಿಳಿಯದಿದ್ದರಿಂದ ಹಾಗೂ ಬೇಗ ಮದುವೆ ಮಂಟಕ್ಕೆ ಹೋಗಬೇಕಾಗಿದ್ದರಿಂದ ನಾನೇ ಡ್ರೈವ್​ ಮಾಡಿದೆ ಎಂದು ಸಾಗರಿಕ ಹೇಳಿದ್ದಾರೆ.

ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net