ತೆಂಗಿನಘಟ್ಟ ಶಾಲೆಯಲ್ಲಿ ಪೋಷಣ್ ಅಭಿಯಾನ

26-kkr.2.(9-23
Published on

ಮಂಡ್ಯ : ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಕಾಡದಿರಲು ಪೌಷ್ಟಿಕಾಂಶಭರಿತ ಆಹಾರ ಸೇವನೆ ಮಾಡಬೇಕು ಎಂದು ಮುಖ್ಯಶಿಕ್ಷಕ ಬಿ.ಡಿ. ರಮೇಶ್ ಹೇಳಿದರು.

ಕಿಕ್ಕೇರಿ ಹೋಬಳಿಯ ತೆಂಗಿನಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಆರೋಗ್ಯಕ್ಕೆ ಪಾಲಕರ ಪಾತ್ರ ಮುಖ್ಯ. ಮನೆಯ ಅಂಗಳವನ್ನೇ ಕೈತೋಟವಾಗಿಸಿಕೊಳ್ಳಿ. ಸೊಪ್ಪು, ತರಕಾರಿ ಬೆಳೆದು ನಿತ್ಯ ಮಕ್ಕಳಿಗೆ ಸೇವಿಸಲು ತಿಳಿಸಿ. ಮಕ್ಕಳಿಗೆ ಕಡ್ಡಾಯವಾಗಿ ಕಾಲಕ್ಕೆ ತಕ್ಕಂತೆ ಲಸಿಕೆ ಹಾಕಿಸಿ ಎಂದು ತಿಳಿ ಹೇಳಿದರು.


ಶಿಕ್ಷಕಿ ಬಿ.ಎಂ. ವರಲಕ್ಷ್ಮೀ ಮಾತನಾಡಿ, 2018ರಲ್ಲಿ ರಾಜಾಸ್ಥಾನದಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭವಾಗಿ, ಇಂದು ಎಲ್ಲ ರಾಜ್ಯದಲ್ಲಿ ಯಶಸ್ವಿಯಾಗಿ ಮಕ್ಕಳ ಆರೋಗ್ಯಕ್ಕೆ ಮುಂದಾಗಲಾಗಿದೆ. ಮಕ್ಕಳಿಗೆ ಸೊಪ್ಪು, ತರಕಾರಿ, ಸಿರಿಧಾನ್ಯ, ಹಾಲು, ಮೊಟ್ಟೆ ವಿವಿಧ ಬಗೆಯ ಆಹಾರ ಪದಾರ್ಥ ಬಳಕೆ ಮುಖ್ಯವಾಗಿದೆ. ಜ್ಞಾನ, ಶಕ್ತಿ, ಆರೋಗ್ಯ, ದೈಹಿಕ ಬೆಳವಣಿಗೆ ಅವಶ್ಯವಿರುವ ಇಂತಹ ಆಹಾರ ಸೇವಿಸಿ. ಸಿಹಿ ತಿನಿಸು, ಬೇಕರಿ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಶಿಕ್ಷಕರಾದ ಕಿರಣ್, ಜಿ.ಎಸ್. ಹೇಮಲತಾ, ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net