

ಬೆಳ್ತಂಗಡಿ: ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಲೋ ಬಿಪಿ ಕಾರಣದಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಸುಮಾ(19) ಮೃತ ವಿದ್ಯಾರ್ಥಿನಿ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿಯಾಗಿದ್ದಾರೆ. ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಈಕೆ ಲೋ ಬಿಪಿಯಿಂದ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್ 11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ಬಳ್ಳಮಂಜದಲ್ಲಿರುವ ತನ್ನ ಅಕ್ಕನ ಮನೆಗೆ ತೆರಳಿದ್ದಳು. ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ(Low BP)ಉಂಟಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.