ನರ್ಸರಿ ಮಕ್ಕಳ ಫೀಸ್​ ಬರೋಬ್ಬರಿ 2,51,000 ರೂ.!: ಖಾಸಗಿ ಶಾಲೆಯ ಪೋಸ್ಟ್​ ವೈರಲ್​..|Nursery

untitled-design-43-688cb3d41b323
Published on

Nursery: ಖಾಸಗಿ ಶಾಲೆಯೊಂದು ತನ್ನ ಶಾಲೆಯ ಮಕ್ಕಳಿಗೆ ಶುಲ್ಕ ಪಟ್ಟಿ ಬಿಡುಗಡೆ ಮಾಡಿದ್ದು, ಒಮ್ಮೆ ಶುಲ್ಕದ ಪಟ್ಟಿ ನೋಡಿದ ಜನರು ಹೌಹಾರಿದ್ದಾರೆ.

ಹೌದು, ಶಾಲೆಯೊಂದು ನರ್ಸರಿ ಮಕ್ಕಳ 2025-26 ಶೈಕ್ಷಣಿಕ ವರ್ಷದ​ ಫೀಸ್​​ ಬರೋಬ್ಬರಿ 2,51,000 ರೂ. ಇರುವ ಪಟ್ಟಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಸಿಕೊಂಡಿದ್ದು, ಇದೀಗ ಮಕ್ಕಳ ಫೀಸ್​ ಬಗ್ಗೆ ಹೊಸ ಚರ್ಚೆ ಹುಟ್ಟು ಹಾಕಿದೆ.

ಇನ್ನು ವೈರಲ್​ ಆದ ಪೋಟೋದಲ್ಲಿ ಶಾಲೆಯ ಹೆಸರನ್ನು ಉಲ್ಲೆಖಿಸದಿದ್ದರೂ, ಇದು ಹೈದರಾಬಾದ್​ನಲ್ಲಿರುವ ಖಾಸಗಿ ಶಾಲೆಗೆ ಸೇರಿದ ವರದಿಗಳು ಉಲ್ಲೇಖಿಸಿವೆ.

ಧರ್ಮಪಾರ್ಟಿ ಆಫ್​ ಇಂಡಿಯಾದ ಸಂಸ್ಥಾಪಕಿ ಅನುರಾಧ ತಿವರಿ ತಮ್ಮ ಎಕ್ಸ್​ (X) ಖಾತೆಯಲ್ಲಿ ಶುಲ್ಕದ ಸ್ಕ್ರೀನ್​ಶಾಟ್​ವೊಂದನ್ನು ಹಂಚಿಕೊಂಡಿದ್ದು, '' ನರ್ಸರಿ ಶುಲ್ಕ 2,51,000, ಈಗ ABCD ಕಲಿಯುವುದರಿಂದ ತಿಂಗಳಿಗೆ 21,000 ರೂ ವೆಚ್ಚವಾಗುತ್ತದೆ. ಇಷ್ಟೊಂದು ಹಾಸ್ಯಾಸ್ಪದವಾಗಿ ಶುಲ್ಕವನ್ನು ಸಮರ್ಥಿಸಲು ಶಾಲೆಗಳು ಏನು ಕಲಿಸುತ್ತಿವೆ? ಎಂದು ಅವರು ತಮ್ಮ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇಂಟರ್ನೆಟ್​ ಪ್ರತಿಕ್ರಿಯೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿರುವ ಈ ಪೋಸ್ಟ್​​ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಕೆಲ ಬಳಕೆದಾರರು ಶುಲ್ಕದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಒಬ್ಬ ಬಳಕೆದಾರ ಶಿಕ್ಷಣ ಸಂಸ್ಥೆ ಒಂದು ರೀತಿಯ ವಂಚನೆಯಾಗಿ ಮಾರ್ಪಟ್ಟಿದೆ. ಕೆಲವು ವಿಷಯಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net