

Numerology: ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಜನ್ಮ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜನ್ಮ ದಿನಾಂಕದ ಸಹಾಯದಿಂದ, ನಿಮ್ಮ ವೃತ್ತಿಜೀವನದಿಂದ ಹಿಡಿದು ಪ್ರೇಮ ಜೀವನದವರೆಗೆ ಎಲ್ಲದರ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು.
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಇದೇ ಸೆ.22 ರಿಂದ ಅ.2ರವರೆಗೆ ನವರಾತ್ರಿ(ದಸರಾ) ಪೂಜೆ ನಡೆಯುತ್ತಿದೆ. ಈ ವೇಳೆ 9 ಹಗಲು ಮತ್ತು 9 ರಾತ್ರಿಗಳ ಕಾಲ ಅತ್ಯಂತ ಭಕ್ತಿ ಮತ್ತು ಉತ್ಸವದಿಂದ ದುರ್ಗಾದೇವಿ ಪೂಜೆ ಆಚರಣೆ ಮಾಡಲಾಗುತ್ತದೆ. ದುರ್ಗಾದೇವಿ ಒಬ್ಬಳೆ ಆಗಿದ್ದರೂ ದೇಶದಲ್ಲಿ ಈ ಒಂಬತ್ತು ದಿನಗಳ ಕಾಲ ಆ ಪ್ರದೇಶಕ್ಕೆ ತಕ್ಕಂತೆ ವಿಭಿನ್ನವಾಗಿ ಪೂಜೆ ಮಾಡಲಾಗುತ್ತದೆ.
ಈ ವೇಳೆ ಆಯಾ ದಿನಾಂಕದಲ್ಲಿ ಹುಟ್ಟಿದ ಜನರು ಅವರ ಜನ್ಮದಿನದ ದಿನಾಂಕದ ಅನುಗುಣವಾಗಿ ದುರ್ಗಾದೇವಿಗೆ ವಿಶೇಷ ಹೂವು ಅರ್ಪಿಸುವುದರಿಂದ ಸಂಪತ್ತು, ಆರೋಗ್ಯ ಮತ್ತು ಆಯಸ್ಸು ಹೆಚ್ಚುತ್ತದೆ ಎಂದು ನಂಬಿಕೆಯಾಗಿದೆ.
ಹೌದು, ನಿಮ್ಮ ಜನ್ಮ ದಿನಾಂಕದ ಸಂಖ್ಯೆಗಳನ್ನು ಸೇರಿಸುವ ಮೂಲಕ ನಿಮ್ಮ ಮೂಲ ಸಂಖ್ಯೆಯನ್ನು ನೀವು ಕಂಡುಹಿಡಿಯಬಹುದು. ಉದಾಹರಣೆಗೆ ನೀವು ಯಾವುದೇ ತಿಂಗಳ 23 ರಂದು ಜನಿಸಿದ್ದೀರಿ ಎಂದು ಭಾವಿಸೋಣ, ಆಗ ನಿಮ್ಮ ಮೂಲ ಸಂಖ್ಯೆ 5 ಆಗಿರುತ್ತದೆ, ಏಕೆಂದರೆ 2+3=5. ಹಾಗೆಯೇ, ಮೊದಲನೆಯದಾಗಿ ಜನ್ಮ ದಿನಾಂಕದ ಮೂಲ ಸಂಖ್ಯೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ಸಂಖ್ಯೆ-1
1ನೇ ದಿನಾಂಕದಂದು ಹುಟ್ಟಿದ ಜನರು ಸೂರ್ಯನಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಚೆಂಡು ಹೂವು ಅರ್ಪಿಸಿ. ಇದು ರೋಮಂಚನಕಾರಿ ಶಕ್ತಿಯ ಸಂಕೇತವಾಗಿದೆ.
ಸಂಖ್ಯೆ-2
ಈ ಸಂಖ್ಯೆಯನ್ನು ಹೊಂದಿದ ಜನರು ಚಂದ್ರನಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಮಲ್ಲಿಗೆ ಹೂವು ಅರ್ಪಿಸಬೇಕು. ಇದು ಭಕ್ತಿಯ ಸಂಕೇತವಾಗಿದೆ.
ಸಂಖ್ಯೆ-3
ಈ ಸಂಖ್ಯೆಯನ್ನು ಹೊಂದಿದ ಜನರು ಗುರು ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಸೂರ್ಯಕಾಂತಿ ಹೂವು ಅರ್ಪಿಸಬೇಕು. ಇದು ಪ್ರಶಾಂತತೆಯ ಸಂಕೇತವಾಗಿದೆ.
ಸಂಖ್ಯೆ-4
ಈ ಸಂಖ್ಯೆಯನ್ನು ಹೊಂದಿದ ಜನರು ರಾಹುನಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಮಲ್ಲಿಗೆ ಹೂವು ಅರ್ಪಿಸಬೇಕು. ಇದು ನಕರಾತ್ಮಕತೆಯನ್ನು ತೆಗೆದು ಹಾಕುತ್ತದೆ.
ಸಂಖ್ಯೆ-5
ಈ ಸಂಖ್ಯೆಯನ್ನು ಹೊಂದಿದ ಜನರು ಬುಧು ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಬಿಳಿ ಕಮಲ ಹೂವು ಅರ್ಪಿಸಬೇಕು. ಇದು ಪ್ರೀತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ.
ಸಂಖ್ಯೆ-6
ಈ ಸಂಖ್ಯೆಯನ್ನು ಹೊಂದಿದ ಜನರು ಶುಕ್ರನಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಗುಲಾಬಿ ಹೂವು ಅರ್ಪಿಸಬೇಕು. ಇದು ಧೈರ್ಯದ ಸಂಕೇತವಾಗಿದೆ.
ಸಂಖ್ಯೆ-7
ಈ ಸಂಖ್ಯೆಯನ್ನು ಹೊಂದಿದ ಜನರು ಕೇತುವಿನಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಕಮಲ ಹೂವು ಅರ್ಪಿಸಬೇಕು. ಇದು ಶಾಂತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿದೆ.
ಸಂಖ್ಯೆ-8
ಈ ಸಂಖ್ಯೆಯನ್ನು ಹೊಂದಿದ ಜನರು ಶನಿಯಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ಆರ್ಕೆಡ್ ಹೂವು ಅರ್ಪಿಸಬೇಕು. ಇದು ತಾಳ್ಮೆ ಮತ್ತು ಭಕ್ತಿ ಸಂಕೇತವಾಗಿದೆ.
ಸಂಖ್ಯೆ-9
ಈ ಸಂಖ್ಯೆಯನ್ನು ಹೊಂದಿದ ಜನರು ಮಂಗಳನಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ದುರ್ಗಾದೇವಿಗೆ ದಾಸವಾಳ ಹೂವು ಅರ್ಪಿಸಬೇಕು. ಇದು ಶಾಂತಿ, ಸಮೃದ್ಧಿ ಸಂಕೇತವಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.