

ತ್ರಿಶೂರ್: ಹಾಸ್ಟೆಲ್ನಲ್ಲಿ ವಾಸವಾಗಿರುವ 23 ವರ್ಷದ ಯುವತಿ ಎಂದು ತಪ್ಪಾಗಿ ಭಾವಿಸಿದ ಉದ್ಯಮಿಯೊಬ್ಬ, ಆಕೆಯೊಂದಿಗೆ ಆನ್ಲೈನ್ನಲ್ಲಿ ಸ್ನೇಹ ಬೆಳೆಸಿದ್ದಾನೆ. ಅತಿಯಾದ ಸಲಿಗೆಗೆ ಒಳಪಟ್ಟು, ಇದೀಗ 2.5 ಕೋಟಿ ರೂ. ಕಳೆದುಕೊಳ್ಳುವ ಮೂಲಕ ಮಹಿಳೆಯ ವಂಚನೆಗೆ (Nude Video) ಸಿಲುಕಿದ ಘಟನೆ ಕೇರಳದ ತ್ರಿಶೂರ್ನಲ್ಲಿ ವರದಿಯಾಗಿದೆ.
ಉದ್ಯಮಿಯನ್ನು ಬಲೆಗೆ ಬೀಳಿಸಿ 2.5 ಕೋಟಿ ಸುಲಿಗೆ ಮಾಡಿದ ಮಹಿಳೆ, ತಾನು ಹಾಸ್ಟೆಲ್ನಲ್ಲಿ ಓದುತ್ತಿರುವ 23 ವರ್ಷದ ಯುವತಿ ಎಂದು ಉದ್ಯಮಿಗೆ ಪರಿಚಯಿಸಿಕೊಂಡಿದ್ದಾಳೆ. ವಾಟ್ಸ್ಆ್ಯಪ್ನಲ್ಲಿ ಶುರುವಾದ ಇಬ್ಬರ ಪರಿಚಯ, ವಿಡಿಯೋ ಕಾಲ್ ಮಾಡಿ, ಮಾತನಾಡುವ ಹಂತಕ್ಕೆ ಹೋಗಿದೆ. ಈ ವೇಳೆ ಆಕೆ ಉದ್ಯಮಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ, ಸಂಭಾಷಣೆ ನಡೆಸಿದ್ದಾಳೆ. ಇದನ್ನೇ ವಂಚನೆಯ ಅಸ್ತ್ರವನ್ನಾಗಿ ಬಳಸಿಕೊಂಡ ಕಿರಾತಕಿ, ವ್ಯಕ್ತಿಗೆ ಕಾಲೇಜು ಫೀಸ್, ಮತ್ತೊಂದಕ್ಕೆ ಎಂದು ತನ್ನ ಅಗತ್ಯಕ್ಕೆ ಬೇಕಾದಷ್ಟು ಹಣದ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಕಂಗಾಲಾದ ಉದ್ಯಮಿ, ತಾನು ಬ್ಯಾಂಕ್ ಖಾತೆಯಲ್ಲಿ ಉಳಿಸಿಟ್ಟಿದ್ದ ಹಣವನ್ನೆಲ್ಲಾ ಆಕೆಯ ಬೆದರಿಕೆಗೆ ಬೆದರಿ ಸುರಿದಿದ್ದಾನೆ.
ಬ್ಯಾಂಕ್ ಖಾತೆಯಲ್ಲಿದ್ದ ಹಣ ಖಾಲಿಯಾದರೂ ಬಿಡದ ವಂಚಕಿ, ಹಣದ ಬೇಡಿಕೆಗೆ ಡಿಮ್ಯಾಂಡ್ ಮಾಡುವುದನ್ನು ನಿಲ್ಲಿಸಿಲ್ಲ. ನಾನು ಕೇಳಿದಷ್ಟು ದುಡ್ಡು ಕೊಟ್ಟರೆ ಸರಿ, ಇಲ್ಲವಾದರೆ ವಿಡಿಯೋ ಕಾಲ್ ಹರಿಬಿಡುತ್ತೇನೆ ಎಂದು ಆಮಿಷವೊಡ್ಡಿದ್ದಾಳೆ. ಭಯಕ್ಕೆ ಒಳಪಟ್ಟ ಉದ್ಯಮಿ, ತನ್ನ ಪತ್ನಿಯ ಚಿನ್ನವನ್ನು ಗಿರವಿ ಇಟ್ಟು ಮತ್ತು ಅತ್ತೆಯ ಹೆಸರಿನಲ್ಲಿದ್ದ ಫಿಕ್ಸಡ್ ಡೆಪಾಸಿಟ್ ಹಣವನ್ನು ಹೊರತೆಗೆದು, ಆಕೆಗೆ ನೀಡಿದ್ದಾನೆ. ಇಷ್ಟಾದರೂ ಸಹ ಆಕೆಯ ಹಣದ ದಾಹ ತೀರದ ಹಿನ್ನಲೆ ವ್ಯಕ್ತಿ, ಪೊಲೀಸರಿಗೆ ದೂರು ನೀಡಿದ್ದಾನೆ. ಅಸಲಿಗೆ ಆಕೆ ಹಾಸ್ಟೆಲ್ನಲ್ಲಿ ಓದುತ್ತಿರುವ ಯುವತಿಯೂ ಅಲ್ಲ, ದುಡ್ಡಿಲ್ಲದ ಬಡವಿಯೂ ಅಲ್ಲ ಎಂಬುದು ಖಾಕಿ ಪಡೆಯ ತನಿಖೆಯಲ್ಲಿ ಹೊರಬಿದ್ದಿದೆ.
ಆರೋಪಿ ಮಹಿಳೆ ತನ್ನ ಪತಿಯೊಂದಿಗೆ ಸೇರಿಕೊಂಡು ಉದ್ಯಮಿ ಪುರುಷರನ್ನು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳುವುದರಲ್ಲಿ ನಿಸ್ಸೀಮಳಾಗಿದ್ದಳು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಬೆನ್ನಲ್ಲೇ ಖಾಕಿ ಪಡೆ ಸೈಬರ್ ಸೆಲ್ ಸಹಾಯದಿಂದ ತನಿಖೆ ಕೈಗೊಂಡರು. ಪೊಲೀಸರು ಆರೋಪಿಗಳು ಅಷ್ಟಮುಡಿಮುಕ್, ಕೊಲ್ಲಂ ಪನಯಂನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಪತ್ತೆಹಚ್ಚಿದ್ದಾರೆ. ಮೊದಲಿಗೆ ಪೊಲೀಸರು ತಮ್ಮ ಆಸ್ತಿಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸುತ್ತಿರುವುದನ್ನು ಅರಿತ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇವರಿಬ್ಬರು ವಯನಾಡಿನಲ್ಲಿರುವುದು ಕಂಡುಬಂದಿದೆ. ಆದರೆ ಅಲ್ಲಿಂದಲೂ ಎಸ್ಕೆಪ್ ಆಗಿದ್ದಾರೆ. ಕಿರಾತಕ ಗಂಡ-ಹೆಂಡತಿಯ ನೆರಳು ಬೆನ್ನಟ್ಟಿದ ಪೊಲೀಸರು, ಕಡೆಗೂ ಅವರನ್ನು ಅಂಗಮಾಲಿಯಲ್ಲಿ ಬಂಧಿಸಿದ್ದಾರೆ.
ಆರೋಪಿಯಿಂದ 82 ಮೌಲ್ಯದ ಚಿನ್ನಾಭರಣ, 2 ಐಷಾರಾಮಿ ಕಾರು, ಎರಡು ಜೀಪು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಇನ್ಸ್‌ಪೆಕ್ಟರ್ ಪಿ.ಲಾಲಕುಮಾರ್ ನೇತೃತ್ವದಲ್ಲಿ ಎರಡು ತಂಡಗಳಾಗಿ ತನಿಖೆ ನಡೆಸಲಾಗಿದೆ. ಸೈಬರ್ ಠಾಣೆ ಇನ್ಸ್‌ಪೆಕ್ಟರ್ ವಿ.ಎಸ್. ಸುಧೀಶ್ ಕುಮಾರ್, ಪಶ್ಚಿಮ ಎಸ್‌ಐ ಸಿಸಿಲ್ ಕ್ರಿಸ್ಟ್ಯಾನ್ ರಾಜ್, ಎಎಸ್‌ಐ ಪ್ರೀತ್, ಸಿಪಿಒಗಳಾದ ದೀಪಕ್, ಹರೀಶ್, ಅಜಿತ್, ಅಖಿಲ್ ವಿಷ್ಣು ಮತ್ತು ನಿರೀಕ್ಷಾರನ್ನು ಒಳಗೊಂಡ ತಂಡ ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ,(ಏಜೆನ್ಸೀಸ್).