NTR ದೇವರ 2 ದಿನದ ಕಲೆಕ್ಷನ್ ಅಚ್ಚರಿ ಮೂಡಿಸುತ್ತೆ ! 2ನೇ ದಿನ ಬಾಕ್ಸ್​ ಆಫೀಸಲ್ಲೇನಾಯ್ತು?

NTR devara 2 day collection
devara
Published on

ಹೈದರಾಬಾದ್​: ಜೂನಿಯರ್​ NTR ಅಭಿನಯದ ಬಹುನಿರೀಕ್ಷಿತ ದೇವರ ಶುಕ್ರವಾರ(ಸೆ.27) ಬಿಡುಗಡೆಯಾಗಿದ್ದು, ದೇಶ, ವಿದೇಶಗಳಲ್ಲಿ ಭರ್ಜರಿಯಾಗಿ ಕಲೆಕ್ಷನ್​ ಮಾಡುತ್ತಿದೆ. 2 ದಿನದ ಕಲೆಕ್ಷನ್ 243 ಕೋಟಿ ರೂ. ಸಂಗ್ರಹವಾಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಮೊದಲ ದಿನದ ಕಲೆಕ್ಷನ್ 140 ಕೋಟಿ ರೂ. ಬಂದಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ 172 ಕೋಟಿ ರೂ. ಸಂಗ್ರಹವಾಗಿದೆ ನಿರ್ಮಾಪಕರು ಅಧಿಕೃತವಾಗಿ ಪೋಸ್ಟ್​ ಹಾಕಿದ್ದಾರೆ.

ಚಿತ್ರಕ್ಕೆ ಪಾಸಿಟಿವ್ ಟಾಕ್ ಜತೆಗೆ ನೆಗಟೀವ್​ ಟಾಕ್​ ಕೇಳಿ ಬಂದ ಕಾರಣ ಎರಡನೇ ದಿನದ ಕಲೆಕ್ಷನ್ ನಲ್ಲಿ ಅರ್ಧಕ್ಕಿಂತ ಕಡಿ ಸಂಗ್ರಹವಾಗಿದೆ ಎನ್ನಲಾಗಿದೆ.

ಎರಡನೇ ದಿನ 71 ಕೋಟಿ ರೂ.ಗ್ರಾಸ್ ಸಿಕ್ಕಿದೆಯಂತೆ. ಇದಕ್ಕೆ ಮೊದಲ ದಿನ 172 ಕೋಟಿ ರೂ. ಸೇರಿಸಿದರೆ, ಎರಡು ದಿನದಲ್ಲಿ 243 ಕೋಟಿ ರೂ. ಬಂದಿದೆ. ಅಂದರೆ ಮೊದಲ ದಿನ ಮತ್ತು ಎರಡನೇ ದಿನಕ್ಕೆ 100 ಕೋಟಿ ವ್ಯತ್ಯಾಸವಾಗಿದೆ. ಆದಾಯದಲ್ಲಿ ಒಂದು ದಿನಕ್ಕೇ ಅರ್ಧದಷ್ಟು ವ್ಯತ್ಯಾಸವಾಗಿರುವುದಕ್ಕೆ ನೆಗಟೀವ್​ ಟಾಕ್ಸ್​ ಕಾರಣ ಎನ್ನಲಾಗುತ್ತಿದೆ.

ಬುಕ್​ ಮೈ ಶೋನಲ್ಲಿ ಏನಾಯ್ತು?: NTR

ಮೊದಲ ದಿನವೇ ಬುಕ್ ಮೈ ಶೋನಲ್ಲಿ ಕಲ್ಕಿ ಮತ್ತು ಸಲಾರ್‌ ಚಿತ್ರಗಳನ್ನು ಮೀರಿಸಿ ಮುನ್ನಡೆಯುತ್ತಿದೆ ಎನ್ನಲಾಗಿತ್ತು. ಆದರೆ ಈಗ ಆರರಿಂದ ಏಳು ಲಕ್ಷ ಟಿಕೆಟ್ ಬುಕ್ ಆಗಿತ್ತು ಎನ್ನಲಾಗುತ್ತಿದೆ. ಅದೇ ಕಲ್ಕಿ ಮತ್ತು ಸಲಾರ್‌ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿತ್ತು.

ದೇವರ ಚಿತ್ರಕ್ಕೆ ಮುಂದೆ ದಸರಾ ರಜೆಗಳು ಬರುವುದರಿಂದ ಒಂದಷ್ಟು ಪ್ಲಸ್ ಆಗುವ ಸಾಧ್ಯತೆ ಇದೆ. ವಾರದ ಕಲೆಕ್ಷನ್​ ನಲ್ಲೂ ಮೊದಲ ದಿನದಂತೆ ಅಧಿಕ ಮೊತ್ತ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಇಂಡಸ್ಟ್ರಿ ಮೂಲಗಳು ಹೇಳುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net