

ನವದೆಹಲಿ: ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಕರೊನಾ ಕಾರಣದಿಂದ ಮುಂದೂಡಲಾಗಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜೇನ್ಸಿ (ಎನ್ಟಿಎ) ಮಂಗಳವಾರ ತಿಳಿಸಿದೆ.
2020 ರ ಡಿಸೆಂಬರ್ನಲ್ಲಿ ನಡೆಯಬೇಕಿದ್ದ ನೆಟ್ ಪರೀಕ್ಷೆಯನ್ನು ಮೇ 2 ರಿಂದ 17 ರ ಮಧ್ಯೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ದೇಶದಲ್ಲಿ ಕರೊನಾ ಎರಡನೇ ಅಲೆ ತೀವ್ರ ವ್ಯಾಪಿಸಿರುವ ಕಾರಣ ಮಹತ್ವದ ಪರೀಕ್ಷೆಗಳನ್ನು ಮುಂದಕ್ಕೆ ಹಾಕಲಾಗಿದೆ.
ಕರೊನಾ ಎರಡನೇ ಅಲೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಎನ್ಟಿಎ ಮಹಾ ನಿರ್ದೇಶಕರಿಗೆ ಯುಜಿಸಿ ನೆಟ್ ಪರೀಕ್ಷೆಗಳನ್ನು ಮುಂದೂಡಲು ಸೂಚಿಸಿದ್ದೇನೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಟ್ವಿಟ್ನಲ್ಲಿ ಹೇಳಿದ್ದರು.
ಸಿಬಿಎಸ್ಇ ಪರೀಕ್ಷೆಗಳ ಬಗ್ಗೆ ನಿರ್ಧಾರ ಕೈಗೊಂಡ ನಂತರ ನೆಟ್ ಪರೀಕ್ಷೆಗಳನ್ನು ಮುಂದೂಡವ ಎರಡನೇ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.