

ಕಡಬ: ವಿದ್ಯಾರ್ಥಿ ಸಂಘ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ ಎಂದು ಪ್ರಾಂಶುಪಾಲ ಚಂದ್ರಶೇಖರ್ ಕೆ. ಹೇಳಿದರು.
ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸಂಘ ಮತ್ತು ಎನ್ನೆಸ್ಸೆಸ್ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸಕ ದಾಮೋದರ್ ಎನ್. ಮಾತನಾಡಿ, ಪ್ರಜಾಪ್ರಭುತ್ವ ಭಾರತದಲ್ಲಿ ಭವಿಷ್ಯದ ನಾಯಕರನ್ನು ಸೃಷ್ಟಿ ಮಾಡುವಂತಹ ಕೆಲಸವನ್ನು ವಿದ್ಯಾರ್ಥಿ ಸಂಘ ಮಾಡುತ್ತದೆ. ಸಂವಿಧಾನವು ಜನರಿಗೆ ವಿವಿಧ ರೀತಿಯ ಹಕ್ಕುಗಳು ಮತ್ತು ಜವಾಬ್ದಾರಿ ನೀಡಿರುತ್ತದೆ. ಇದರ ಮಹತ್ವ ಅರಿತು ಪ್ರಜ್ಞಾಪೂರ್ವಕವಾಗಿ ವರ್ತಿಸಿದಾಗ ಪ್ರಜಾಪ್ರಭುತ್ವದ ಮೂಲ ಉದ್ದೇಶದ ಈಡೇರಲಿದೆ ಎಂದರು.
ಎನ್ನೆಸ್ಸೆಸ್ ಘಟಕ ಯೋಜನಾಧಿಕಾರಿ ಕೀರ್ತನ್ ಘಟಕದ ಚಟುವಟಿಕೆಗಳ ಪರಿಚಯಿಸಿದರು. ಉಪನ್ಯಾಸಕ ಶಿವಪ್ರಸಾದ್ ಪಿ. ಪದಪ್ರದಾನ ಸಮಾರಂಭ ನೆರವೇರಿಸಿದರು. ಉಪನ್ಯಾಸಕ ಲೋಹಿತ್ ಕೆ. ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ನಾಯಕ ಪ್ರಖ್ಯಾತ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕಶ್ವಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶ್ರೇಯಾ ನಿರೂಪಿಸಿದರು.