ಸೇವೆ ಭಗವಂತನಿಗೆ ಪ್ರಿಯ : ಅರ್ಜೆನ್ ಅಲಿಯಾಸ್ ಅರ್ಜುನ್ ಆಶಯ ಎನ್ನೆಸ್ಸೆಸ್ ಶಿಬಿರ

Upp_NSS 13
Published on

ಉಪ್ಪಿನಂಗಡಿ: ಸೇವಾ ಮನೋಭಾವ ನಮ್ಮೆಲ್ಲರ ಬದುಕಿಗೆ ಅವರ್ಣನೀಯ ಸಂತಸದ ಬೆಳಕು ಒದಗಿಸುತ್ತದೆ. ಮಾನವನ ಜೀವನದಲ್ಲಿ ಸೇವೆ ಭಗವಂತನ ಪ್ರೀತಿಗೆ ಪಾತ್ರವಾಗುವುದರಿಂದ ಸೇವೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರಬೇಕೆಂದು ನೆದರ್‌ಲ್ಯಾಂಡ್ ದೇಶದ ಉದ್ಯಮಿ, ಸಾಮಾಜಿಕ ಸೇವಾ ಕಾರ್ಯಕರ್ತ ಅರ್ಜೆನ್ ಅಲಿಯಾಸ್ ಅರ್ಜುನ್ ಕರೆ ನೀಡಿದರು.

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕವು ಕೊಡಿಂಬಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಎನ್ನೆಸ್ಸೆಸ್ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ, ಮುಖ್ಯಸ್ಥ ಡಾ.ನಂದೀಶ್ ವೈ.ಡಿ. ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣ ಅರಿತುಕೊಂಡರೆ ಸಾಲದು, ಅವುಗಳನ್ನು ಆಚರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಕೋಡಿಂಬಾಡಿ ದ.ಕ.ಜಿ.ಪ ಪಂ.ಸ.ಪ್ರಾ ಶಾಲೆ ಸಹ ಶಿಕ್ಷಕಿ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಸಿಯಾ, ಕೋಡಿಂಬಾಡಿ ಅಂಗನವಾಡಿ ಕಾರ್ಯಕರ್ತೆ ಸುಮಲತಾ, ಕಾಲೇಜು ಪ್ರಾಂಶುಪಾಲ ಪ್ರೊ.ರವಿರಾಜ ಎಸ್., ಶಿಬಿರಾಧಿಕಾರಿಗಳಾದ ಡಾ.ಹರಿಪ್ರಸಾದ್ ಎಸ್., ಕೇಶವ ಕುಮಾರ ಬಿ. ಉಪಸ್ಥಿತರಿದ್ದರು. ಶಿಬಿರಾರ್ಥಿ ದುರ್ಗಾ ಪ್ರಸಾದ್ ಸ್ವಾಗತಿಸಿದರು. ರಮ್ಯಾ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು. ಪ್ರದೀಪ್ ವಂದಿಸಿದರು. ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net