ಸಾಮಾಜಿಕ ಸಹಜೀವನದ ಸಂವೇದನೆ ಅರಿವು : ಡಾ.ಶೇಷಪ್ಪ ಕೆ. ಸಲಹೆ

New Project (55)
Published on

ಮೂಡುಬಿದಿರೆ: ಸಹಜೀವನದ ಸಂವೇದನೆ ಕಲಿಯುವುದರ ಜತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ. ಎನ್‌ಎಸ್‌ಎಸ್ ಸ್ವಯಂಸೇವಕರು ಹಳ್ಳಿಗಳಿಗೆ ತೆರಳಿ ತಂತ್ರಜ್ಞಾನದ ಬಳಕೆ, ಆಧಾರ್ ಆಧಾರಿತ ಪಿಂಚಣಿ ಸೇವೆಗಳು, ವಿಶಿಷ್ಟ ಚೇತನರಿಗೆ ಸರ್ಕಾರಿ ಯೋಜನೆ ಸೌಲಭ್ಯ, ವಿದ್ಯಾರ್ಥಿವೇತನ ಅರ್ಜಿ ಪ್ರಕ್ರಿಯೆ, ವೃತ್ತಿ ಕೌಶಲ ತರಬೇತಿ ವಿಷಯಗಳಲ್ಲಿ ಜನತೆಗೆ ಮಾಹಿತಿ ನೀಡಬಹುದು ಎಂದು ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಶೇಷಪ್ಪ ಕೆ. ಹೇಳಿದರು.

ಆಳ್ವಾಸ್ ಪದವಿ(ಸ್ವಾಯತ್ತ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ 2025-26ರ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ನಿಕಟಪೂರ್ವ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಸಂತ ಎ. ಅವರನ್ನು ಸನ್ಮಾನಿಸಲಾಯಿತು.

ಯೋಜನಾಧಿಕಾರಿ ಅಕ್ಷತಾ ಪ್ರಭು ಘಟಕ ಕಾರ್ಯದರ್ಶಿ ವೈಶಾಖ್, ಜತೆ ಕಾರ್ಯದರ್ಶಿ ದ್ವಿತಿ ಉಪಸ್ಥಿತರಿದ್ದರು. ಕಿರಣ್, ಸಂಜನಾ, ಸುಮಿತ್, ಸಮೀಕ್ಷಾ, ಶಶಾಂಕ್, ಪವನ್, ವರ್ಷಿಣಿ ಹಾಗೂ ಪ್ರಕಾಶ್ ನೂತನ ಪದಾಧಿಕಾರಿಗಳ ತಂಡದ ಸದಸ್ಯರಾಗಿ ವಿವಿಧ ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡರು. ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುದೀಪ್ ಸ್ವಾಗತಿಸಿದರು. ಶಶಾಂಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net