More

    ಭಾರತದಲ್ಲೂ ಪತ್ತೆಯಾಯ್ತು ನಿಗೂಢ ಏಕಶಿಲೆ: ಬೆಳಗಾಗುವಷ್ಟರಲ್ಲಿ ಪಾರ್ಕಿನಲ್ಲಿ ಪ್ರತ್ಯಕ್ಷ!

    ಅಹಮದಾಬಾದ್​: ಜಗತ್ತಿನ ಹಲವೆಡೆ ಪತ್ತೆಯಾಗಿ ಬೆರಗು ಮೂಡಿಸಿದ್ದ “ನಿಗೂಢ ಏಕಶಿಲೆ” ಇದೀಗ ಭಾರತದಲ್ಲೂ ಕಂಡುಬಂದಿದೆ. ಗುಜರಾತ್​​ ಅಹಮದಾಬಾದ್​ನ ಸಾರ್ವಜನಿಕ ಸ್ಥಳದಲ್ಲಿ ನಿಗೂಢ ಏಕಶಿಲೆಯನ್ನು ಜನರು ನೋಡಿರುವುದಾಗಿ ವರದಿಯಾಗಿದೆ.

    ಈಗಾಗಲೇ ನಿಗೂಢ ಏಕಶಿಲೆ ಜಗತ್ತಿನ ಸುಮಾರು 30 ನಗರಗಳಲ್ಲಿ ಪತ್ತೆಯಾಗಿದೆ. ಅಹಮದಾಬಾದ್​ನಲ್ಲಿ ಸದ್ಯ ಪತ್ತೆಯಾಗಿರುವ ಏಕಶಿಲೆಯನ್ನು ಲೋಹದಿಂದ ಮಾಡಲಾಗಿದ್ದು, ಅಂದಾಜು 6 ಅಡಿ ಇದೆ. ದೇಶದಲ್ಲಿ ಏಕಶಿಲೆ ಕಂಡುಬಂದಂತಹ ಮೊದಲ ಪ್ರಕರಣ ಇದಾಗಿದೆ.

    ಇದನ್ನೂ ಓದಿ: ಕಸ ಗುಡಿಸುತ್ತಿದ್ದ ಪಂಚಾಯಿತಿ ಕಚೇರಿಯಲ್ಲೇ ಅಧ್ಯಕ್ಷೆ ಗಾದಿಗೇರಿದ ಮಹಿಳೆ..!

    ನಿಗೂಢ ರಚನೆಯನ್ನು ಹೊಂದಿರುವ ಏಕಶಿಲೆಯು ಅಹಮದಾಬಾದ್​ನ ಥಲ್ತೇಜ ಏರಿಯಾದಲ್ಲಿರುವ ಸಿಂಫೋನಿ ಪಾರ್ಕ್​ನಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ ಸ್ಥಳೀಯರು ಇದನ್ನು ನಿಗೂಢ ಏಕಶಿಲೆ ಎಂದು ಕರೆಯುತ್ತಿದ್ದಾರೆ. ಏಕಶಿಲೆಯನ್ನು ನೆಲದ ಮೇಲೆ ನಿರ್ಮಿಸಿರುವಂತೆ ಕಾಣುತ್ತದೆ. ಆದರೆ, ಎಲ್ಲಿಯೂ ನೆಲವನ್ನು ಅಗೆದು ನೆಟ್ಟಿರುವ ಗುರುತುಗಳು ಪತ್ತೆಯಾಗಿಲ್ಲ.

    ಸ್ಥಳೀಯರಿಗೂ ಸಹ ಏಕಶಿಲೆ ಹೇಗೆ ಬಂತು ಎಂಬುದರ ಸುಳಿವು ಇಲ್ಲ. ಪಾರ್ಕಿನ ಒಳಗೂ ಸಹ ಯಾರನ್ನು ನೋಡಲಿಲ್ಲ ಎಂದು ಸ್ಥಳೀಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಾನು ಸಂಜೆ ಮನೆಗೆ ಹೋಗುವಾಗ ಏಕಶಿಲೆ ಅಲ್ಲಿರಲಿಲ್ಲ. ಆದರೆ, ಮಾರನೇ ದಿನ ಬೆಳಗ್ಗೆ ಕೆಲಸಕ್ಕೆ ಬರುವಾಗ ಏಕಶಿಲೆಯನ್ನು ನೋಡಿ ಚಕಿತಗೊಂಡೆ ಎಂದಿದ್ದಾರೆ.

    ತ್ರಿಕೋನ ಮಾದರಿಯಲ್ಲಿರುವ ಏಕಶಿಲೆಯ ಮೇಲ್ಮೈನಲ್ಲಿ ಕೆಲವು ಸಂಖ್ಯೆಗಳು ಮತ್ತು ಚಿಹ್ನೆಗಳಿವೆ. ಇದೀಗ ನಿಗೂಢವಾಗಿ ಪತ್ತೆಯಾಗ ಏಕಶಿಲೆಯ ಮೂಲವನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಏಕಶಿಲೆ ಇದೀಹ ಬಹುಚರ್ಚಿತ ವಿಷಯವಾಗಿದ್ದು, ಸೆಲ್ಫಿ ಮತ್ತು ಫೋಟೋ ಕೇಂದ್ರವಾಗಿದೆ.

    ಇದನ್ನೂ ಓದಿ: ಅತ್ತೆ ಮಾವ ವ್ಯಂಗ್ಯವಾಡಿದರೆ ಅದು ತಪ್ಪಲ್ಲ! ಗಂಡನ ಮನೆಯವರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ!

    ಇನ್ನು ಇದೇ ರೀತಿಯ ನಿಗೂಢ ಏಕಶಿಲೆ ಜಗತ್ತಿನಾದ್ಯಂತ ಸುಮಾರು 30ಕ್ಕೂ ಹೆಚ್ಚು ನಗರಗಳಲ್ಲಿ ಪತ್ತೆಯಾಗಿವೆ. ಮೊದಲ ಬಾರಿಗೆ ಅಮೆರಿಕದ ಉತಾಹ್ ಮರೂಭೂಮಿಯಲ್ಲಿ ಪತ್ತೆಯಾಗಿತ್ತು. ರೋಮಾನಿಯಾ, ಫ್ರಾನ್ಸ್​, ಪೋಲೆಂಡ್​, ಯುಕೆ ಮತ್ತು ಕೊಲಂಬಿಯಾ ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. (ಏಜೆನ್ಸೀಸ್​)

    ಗ್ರಾಪಂ ಚುನಾವಣೆಯಲ್ಲಿ ಗೆದ್ದವರಿಗೆ ಶೀಘ್ರವೇ ತರಬೇತಿ: ಇಲ್ಲಿದೆ ಉಪಯುಕ್ತ ಮಾಹಿತಿ

    ಪ್ರೀತಿಗೆ ಓಕೆ ಎಂದ ಮರುಕ್ಷಣವೇ ಎದುರಾದ ಜವರಾಯ! ಪ್ರಪೋಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಜೋಡಿ!

    ಲಿಫ್ಟ್ ಅಂದುಕೊಂಡು ಒಳಗಡೆ ಹೆಜ್ಜೆಯಿಟ್ಟ ಮಹಿಳಾ ಉದ್ಯೋಗಿಗೆ ಕಾದಿತ್ತು ಭೀಕರ ಸಾವು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts