More

  ಬರಗಾಲಕ್ಕೆ ಹಣ ಕೊಡದಿದ್ದರೂ ಬಿಜೆಪಿಗೆ ವೋಟು ನೀಡಿದ ಜನ: ಸಚಿವ ಚಲುವರಾಯಸ್ವಾಮಿ

  ಬೆಂಗಳೂರು: ಬರಗಾಲ ಪರಿಹಾರಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಣ‌ ಕೊಡದಿದ್ದರೂ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ಮತ್ತೊಮ್ಮೆ ವೋಟು ನೀಡಿದ್ದಾರೆ. ಬಿಜೆಪಿ, ಜೆಡಿಎಸ್ ಸೇರಿ ಅತಿಹೆಚ್ಚು‌ 19 ಸ್ಥಾನಗಳನ್ನು ಗೆದ್ದಿವೆ. ಕೇಂದ್ರ ಸಂಪುಟದಲ್ಲಿ ಸಚಿವರಾಗಿರುವ ರಾಜ್ಯದ ಸಂಸದರ ಜವಾಬ್ದಾರಿಯೂ ಹೆಚ್ಚಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

  ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಮಂಡ್ಯ ಕ್ಷೇತ್ರದ ಜನರು ಬಹಳಷ್ಟು ನಿರೀಕ್ಷೆಯಿಟ್ಟುಕೊಂಡು ವೋಟು ಹಾಕಿ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಕೊಟ್ಟಿದ್ದಾರೆ. ನಿರುದ್ಯೋಗ ನಿವಾರಣೆ ಮಾಡುವಂತಹ ಒಳ್ಳೆಯ ಅವಕಾಶ ಲಭಿಸಿದೆ ಎಂದು ಹೇಳಿದರು.

   ಮಂಡ್ಯ ಕ್ಷೇತ್ರದಲ್ಲಿ ಈಗಾಗಲೇ ಚರ್ಚೆಯಾಗುತ್ತಿದೆ. ಮಂಡ್ಯದ 10 ಸಾವಿರ ಯುವಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಉದ್ಯೋಗ ಕೊಟ್ಟರೆ ಒಳ್ಳೆಯದು ಎಂದು ಚಲುವರಾಯಸ್ವಾಮಿ ಆಶಾಭಾವನೆಯ ಬೀಜ ಬಿತ್ತಿದರು.

  ಗೃಹ ಸಚಿವರು ನೋಡಿಕೊಳ್ತಾರೆ

  ನಟ ದರ್ಶನ್ ಮೇಲೆ ಕೊಲೆ ಆರೋಪ ಪ್ರಕರಣದ ಬಗ್ಗೆ ಮಾಧ್ಯಮದವರಿಗೆ ಗೊತ್ತಿರುವಷ್ಟೇ ನನಗೆ ಗೊತ್ತಿದೆ. ಅದನ್ನೆಲ್ಲ ಗೃಹ ಸಚಿವರು ನೋಡಿಕೊಳ್ಳುತ್ತಾರೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಏನು ಕ್ರಮಕೈಗೊಳ್ಳಬೇಕೋ ಅದು ಆಗುತ್ತದೆ. ಪೊಲೀಸರು ತಮ್ಮ ತನಿಖೆ ಜವಾಬ್ದಾರಿ ಮುಗಿಸಿದ ನಂತರ ಮುಂದಿನ ಹಂತದಲ್ಲಿ ಕೋರ್ಟ್ ವಿಚಾರಣೆ ನಡೆಸಿ ಕಾನೂನು ಪ್ರಕಾರ ಕ್ರಮವಹಿಸುತ್ತದೆ ಎಂದರು.

  See also  ಬೆಂಗಳೂರಿನಲ್ಲಿ ಮುಯ್ ಥಾಯ್ ಚಾಂಪಿಯನ್‌ಷಿಪ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts