

ನೆಲ್ಲೂರು: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದ ಲಿಫ್ಟ್ ಅಪಘಾತದಲ್ಲಿ ಮಹಿಳಾ ಉದ್ಯೋಗಿಯೊಬ್ಬರು ದುರಂತ ಸಾವಿಗೀಡಾಗಿದ್ದಾರೆ.
ಕೊರ್ಲಗುಂಟಾ ಪಟ್ಟಣದ ಅಪಾರ್ಟ್ಮೆಟ್ ಒಂದರಲ್ಲಿ ದುರಂತ ಸಂಭವಿಸಿದೆ. ಮೃತ ಮಹಿಳೆಯನ್ನು ವಸಂತಿ ಎಂದು ಗುರುತಿಸಲಾಗಿದೆ. ಎಲೆವೇಟರ್ ಬರುವ ಮುನ್ನವೇ ನಾಲ್ಕನೇ ಮಹಡಿಯಲ್ಲಿ ಎಲೆವೇಟರ್ ಬಾಕ್ಸ್ ಗೇಟ್ ತೆರೆದುಕೊಂಡು ಅನಾಹುತ ನಡೆದಿದೆ.
ಎಲೆವೇಟರ್ ಬರುವ ಮುನ್ನ ಸರಿಯಾಗಿ ಸಿಗ್ನಲ್ ಲೈಟ್ ಅನ್ನು ಗಮನಿಸದೆ ಲಿಫ್ಟ್ ಅಂದುಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ ವಸಂತಿ ಇದ್ದಕ್ಕಿಂದಂತೆ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಘಟನೆಯ ಬೆನ್ನಲ್ಲೇ ವಂಸತಿ ಪತಿ ಸುರೇಂದ್ರ ರೆಡ್ಡಿ ದೂರು ದಾಖಲಿಸಿದ್ದು, ಅಪಾರ್ಟ್ಮೆಂಟ್ ಮಾಲೀಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)