More

    ಗ್ರಾಪಂ ಚುನಾವಣೆಯಲ್ಲಿ ಗೆದ್ದವರಿಗೆ ಶೀಘ್ರವೇ ತರಬೇತಿ: ಇಲ್ಲಿದೆ ಉಪಯುಕ್ತ ಮಾಹಿತಿ

    ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಶೀಘ್ರವೇ ತರಬೇತಿ ಶುರುವಾಗಲಿದೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆಯಿಂದ ರಾಜ್ಯದ 5,762 ಗ್ರಾಪಂಗಳ 92,131 ಸದಸ್ಯರಿಗೆ ಜ.19ರಿಂದ 26ರವರೆಗೆ ತಾಲೂಕು ಹಂತದಲ್ಲಿ ಪಾತೀತವಾಗಿ ತರಬೇತಿ ನೀಡಲು ಯೋಜಿಸಲಾಗಿದೆ. ತರಬೇತಿಗೆ ಅಂದಾಜು 27.16 ಕೋಟಿ ರೂ. ವೆಚ್ಚವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ವೆಚ್ಚ ಭರಿಸಲಿದೆ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದರು. ತರಬೇತಿಯಲ್ಲಿ ಭಾಗವಹಿಸುವವರು ಬೆಳಗ್ಗೆ ಬಂದು ಸಂಜೆ ವಾಪಸ್​ ತೆರಳಲಿದ್ದಾರೆ. ಸದಸ್ಯರಿಗೆ ಪ್ರಯಾಣ ಭತ್ಯೆ ಮತ್ತು ಗ್ರಾಪಂನಿಂದ ಪ್ರತಿದಿನದ ಭಾಗವಹಿಸುವಿಕೆ ಭತ್ಯೆ ನೀಡಲಾಗುವುದು. ಇದನ್ನೂ ಓದಿರಿ ಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ

    ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಕೆ.ಎಸ್​.ಈಶ್ವರಪ್ಪ, ಜ.19ರಿಂದ ಮಾ.26ರವರೆಗೆ ತಾಲೂಕು ಹಂತದಲ್ಲಿ 10 ತಂಡಗಳಲ್ಲಿ ತರಬೇತಿ ನೀಡಲಾಗುವುದು. 176 ತಾಲೂಕುಗಳ 285 ಕೇಂದ್ರಗಳಲ್ಲಿ ತರಬೇತಿ ನಡೆಯಲಿದ್ದು, ತರಬೇತಿ ನೀಡಿಲು 900 ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

    ಕೆಲ ತಾಲೂಕುಗಳಲ್ಲಿ 2 ಕೇಂದ್ರಗಳನ್ನು ತರಬೇತಿಗೆ ಗುರುತಿಸಲಾಗಿದೆ. ಪ್ರತಿ ತಂಡಕ್ಕೆ 5 ದಿನಗಳ ಮುಖಾಮುಖಿ ತರಬೇತಿ ನೀಡಲಾಗುವುದು. ಪ್ರತಿ ತಂಡದಲ್ಲಿ 40 ಸದಸ್ಯರಿಗೆ ಅವಕಾಶ ಕಲ್ಪಿಸಲಾಗುವುದು. ಪ್ರತಿ ದಿನ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ಮತ್ತು ಪ್ರಶ್ನೋತ್ತರಕ್ಕೆ ಅವಕಾಶ ನೀಡಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿರಿ ಗ್ರಾಪಂ ಚುನಾವಣೆ ಸೋಲಿಂದ ಕಂಗೆಟ್ಟವ ರಾತ್ರೋರಾತ್ರಿ ರಸ್ತೆಯನ್ನೇ ಬಂದ್​ ಮಾಡಿದ!

    ಪ್ರತಿದಿನ ತರಬೇತಿ ಕಾರ್ಯಕ್ರಮ ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ನಡೆಯಲಿದೆ. 15 ವಿವಿಧ ವಿಷಯಾಧಾರಿತ ಅಧಿವೇಶನಗಳ ಮಾಹಿತಿ ಮತ್ತು ಕೌಶಲಾಧಾರಿತ ವಿಚಾರಗಳನ್ನು ಮಂಡಿಸಲಾಗುವುದು. ಪ್ರತಿ ಅಧಿವೇಶನದಲ್ಲಿ ವಿಡಿಯೋ ಮೂಲಕ ವಿಷಯ ತಜ್ಞರಿಂದ ಮಾಹಿತಿ ನೀಡಲಾಗುವುದು. ಸ್ಥಳೀಯವಾಗಿ ಸಂಪನ್ಮೂಲ ವ್ಯಕ್ತಿಗಳ ಸುಗಮಗಾರಿಕೆಯೊಂದಿಗೆ ಗುಂಪು ಚರ್ಚೆ ಮತ್ತು ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಎಂದರು.

    ಒಂದು ತಿಂಗಳೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಅವರಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಿಕೆ ಇತ್ಯಾದಿಗಳ ಕುರಿತು ತರಬೇತಿ ನೀಡಲಾಗುವುದು ಎಂದರು.

    ಏನು ತರಬೇತಿ?: ಗ್ರಾಪಂ ರಚನೆ ಮತ್ತು ಸ್ವರೂಪ, ಯೋಜನೆಗಳು, ಸದಸ್ಯರ ಕರ್ತವ್ಯ ಮತ್ತು ಹೊಣೆಗಾರಿಕೆಗಳು, ವಾರ್ಡ್​ ಮತ್ತು ಗ್ರಾಮಸಭೆ ಇನ್ನಿತರ ಸಭೆಗಳ ನಿರ್ವಹಣೆ, ಹಣಕಾಸು ಸಂಪನ್ಮೂಲ ಲಭ್ಯತೆ, ದೂರದೃಷ್ಟಿ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕುರಿತು ಮಾಹಿತಿ ಒದಗಿಸುವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ.

    ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?

    ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?

    ಗ್ರಾಪಂ ಚುನಾವಣೆ: ಈ ಕ್ಷೇತ್ರಕ್ಕೆ 26 ವರ್ಷದ ಬಳಿಕ ಮತದಾನ, ಮಂಗಳಮುಖಿ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts