Notorious thief ದೇಶದೆಲ್ಲೆಡೆ 128 ಪ್ರಕರಣಗಳಲ್ಲಿ ಬೇಕಾಗಿದ್ದ ಚೋರನನ್ನು ಜೈಲಿಗಟ್ಟಿದ ಕಾರವಾರ ಪೊಲೀಸರು

Notorious thief
Published on

ಕಾರವಾರ:  ನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕಳ್ಳತನ ನಡೆಸಿದ ಅಂತಾರಾಜ್ಯ ಕುಖ್ಯಾತ ಕಳ್ಳ(Notorious thief  )ಒಬ್ಬನನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್ ರಾಜ್ಯದ ಅಮೃತಸರ ಗೋಲ್ಡನ್ ಟೆಂಪಲ್ ಸಮೀಪ ಬಹು ಸಾಹಸದಿಂದ ಸಿನಿಮೀಯ ರೀತಿಯಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಆತ ದೇಶಾದ್ಯಂತ 128 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ. ನ್ಯಾಯಾಲಯದಿಂದ ಸಮನ್ಸ್‌ ಜಾರಿಯಾಗಿದ್ದರೂ ತಲೆಮರೆಸಿಕೊಂಡು ತಿರುಗುತ್ತಿದ್ದ.

ಪಂಜಾಬ್ ಜಲಂಧರ್ ಮೂಲದ ಸಮೀರ್ ತನ್ನ ಹೆಸರುಗಳನ್ನು ಬದಲಾಯಿಸಿಕೊಂಡು ವಿವಿಧೆಡೆ ವಾಸ್ತವ್ಯ ಮಾಡುತ್ತಿದ್ದ. ನಂತರ ಚಾಲಾಕಿತನದಿಂದ ಕಳ್ಳತನ ಮಾಡುತ್ತಿದ್ದ. ಬೆಂಗಳೂರು ದಕ್ಷಿಣದ ಬನಶಂಕರಿ ಶ್ರೀನಗರದಲ್ಲಿ ಈ ಹಿಂದೆ ವಾಸವಿದ್ದ. ಇತ್ತೀಚೆಗೆ ಹೊನ್ನಾವರ ದುರ್ಗಾಕೇರಿಯಲ್ಲಿ ವಾಸವಿದ್ದು, ವಿವಿಧೆಡೆ ಕಳ್ಳತನ ನಡೆಸಿದ್ದ ಎನ್ನಲಾಗಿದೆ. ಆತನ ವಿರುದ್ಧ ಬೆಂಗಳೂರು ನಗರದ 11 ಪೊಲೀಸ್ ಠಾಣೆಗಳಲ್ಲಿ ಒಟ್ಟು 106, ಗೋವಾದ 3 ಪೊಲೀಸ್ ಠಾಣೆಗಳಲ್ಲಿ 7, ಉತ್ತರ ಪ್ರದೇಶದ ನೋಯ್ಡಾದ 4 ಪೊಲೀಸ್ ಠಾಣೆಗಳಲ್ಲಿ 11, ಪಂಜಾಬ್‌ನ 2 ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿದ್ದವು.

Notorious thief

ಆತ ವಿವಿಧ ಊರುಗಳಿಗೆ ತೆರಳಿ ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದ. ನಂತರ ಒಂದೆರಡು ದಿನ ಸುತ್ತಲಿನ ಅಪಾರ್ಟ್‌ಮೆಂಟ್‌ಗಳನ್ನು ವೀಕ್ಷಿಸುತ್ತಿದ್ದ. ನಾನು ಇಲ್ಲಿ ಕುಟುಂಬದ ಜತೆ ಉದ್ಯೋಗಕ್ಕೆ ಬಂದಿದ್ದು, ಫ್ಲಾಟ್‌ ಹಡುಕುತ್ತಿದ್ದೇನೆ ಎಂದು ಐಶಾರಾಮಿಯಾಗಿ ಸೂಟು, ಬೂಟು ಹಾಕಿಕೊಂಡು, ಮಹಿಳೆಯೊಬ್ಬಳ ಜತೆ ಅಥವಾ ಏಕಾಂಗಿಯಾಘಿ  ಫ್ಲಾಟ್‌ಗಳನ್ನು ಹುಡುಕಾಟ ನಡೆಸುತ್ತಿದ್ದ. ಅಲ್ಲಿ ಚಾವಿ ಹಾಕಿದ ಫ್ಲಾಟ್‌ ಕಂಡರೆ ಕೀ ಬಳಸಿ ಬಾಗಿಲು ತೆಗೆದು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎನ್ನಲಾಗಿದೆ.

ನವೆಂಬರ್ 7 ರಂದು ಕಾರವಾರದ ಆಶ್ರಮ ರಸ್ತೆಯಲ್ಲಿರುವ ಅಭಿಮಾನಶ್ರೀ ಅಪಾರ್ಟ್ಮೆಂಟ್‌ನ ಪ್ರಿಯಾ ಅಂತೋನ ಫರ್ನಾಂಡಿಸ್ ಅವರ ಫ್ಲಾಟ್‌ನ ಬಾಗಿಲು ಚಾವಿ ತೆಗೆದು ಕಳ್ಳತನವಾಗಿತ್ತು. ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 3 ತಂಡಗಳಲ್ಲಿ ತನಿಖೆ ಆರಂಭಿಸಿದ್ದರು. ಪಂಜಾಬ್‌ನಲ್ಲಿ ಆತನನ್ನು ಸಿನಿಮೀಯ ರೀತಿಯಲ್ಲಿ ಬೆನ್ನು ಹತ್ತಿ ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ 34.026 ಗ್ರಾಂ ಬಂಗಾರದ ಒಡವೆಗಳು, 3 ಲಕ್ಷ ರೂ. ನಗದು ಸೇರಿ ಒಟ್ಟು 5 ಲಕ್ಷ ರೂ. ಸ್ವತ್ತುಗಳನ್ನು ಜಪ್ತು ಮಾಡಿದ್ದಾರೆ.

ಆತ ಕಾರವಾರ ಲಾಡ್ಜ್‌ ಒಂದರಲ್ಲಿ ಉಳಿದುಕೊಂಡ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದ ಮೇಲೆ ಮೊಬೈಲ್‌ ಲೊಕೇಶನ್‌, ಬೆರಳಚ್ಚು ಮಾಹಿತಿ ಆಧರಿಸಿ Notorious thief ನನ್ನು ಶಹರ ಠಾಣೆಯ ತಂಡ ಬೆನ್ನತ್ತಿದೆ. ಡಿವೈಎಸ್‌ಪಿ ಎಸ್.ವಿ.ಗಿರೀಶ ಮಾರ್ಗದರ್ಶನದಲ್ಲಿ  ಇನ್ಸ್ಪೆಕ್ಟರ್‌ಗಳಾದ ರಮೇಶ ಹೂಗಾರ, ರವೀಂದ್ರ ಬಿರಾದಾರ, ಬೆರಳಚ್ಚು ವಿಭಾಗದ ರಾಘವೇಂದ್ರ ನಾಯ್ಕ, ನಿಸ್ತಂತು ವಿಭಾಗದ ಸಂತೋಷ ಜಾಧವ್, ಪಿಎಸ್‌ಐಗಳಾದ ವಿಶ್ವನಾಥ ನಿಂಗೊಳ್ಳಿ, ಕುಮಾರ ಕಾಂಬಳೆ, ಸಿಬ್ಬಂದಿ ಸೂರಜ್ ಕೊಠಾರಕರ್, ಹಸ್‌ನ್ ಕುಟ್ಟಿ, ಗಿರೀಶಯ್ಯ ಎಂ.ಎಸ್., ರಾಜೇಶ ನಾಯಕ, ಮುಕ್ತುಂ ಸಾಬ್ ಪತ್ತೆಖಾನ್, ವಿಶ್ವನಾಥ ಬಿ.ಟಿ., ಅರ್ಜುನ್ ದೇಸಾಯಿ, ಉದಯ ಗುನಗಾ, ಪ್ರಕಾಶ ದಂಡಪ್ಪನವರ್, ಚಂದ್ರಿಕಾ ಮೊಗೇರ, ವೀಣಾ ಯತ್ನಳ್ಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net