More

    ತರಕಾರಿಗಳ ಬೆಲೆ ಮತ್ತೆ ಏರಿಕೆ: 100 ರೂ.ಗಡಿ ದಾಟಿದ ಕ್ಯಾರೆಟ್, ಬೀನ್ಸ್..!

    ಬೆಂಗಳೂರು: ಕೆಲವು ವಾರಗಳ ಹಿಂದೆಯಷ್ಟೇ ಟೊಮ್ಯಾಟೋ ಬೆಲೆ ಕೇಳಿ ಕಂಗೆಟ್ಟಿದ್ದ ಜನರಿಗೆ ಇದೀಗ ಎಲ್ಲಾ ತರಕಾರಿಗಳು 100 ರೂ. ಗಡಿ ದಾಟಿರುವುದು ಕೇಳಿ ತತ್ತರಿಸಿದ್ದಾರೆ.

    ಹೌದು, ಟೊಮ್ಯಾಟೋ ನಂತರ ಇದೀಗ ಕ್ಯಾರೆಟ್, ಬೀನ್ಸ್ ಬೆಲೆ 100 ರೂ. ಗಡಿ ದಾಟಿದೆ. ಏಕಾಏಕಿ ಕೆಜಿ ಬೀನ್ಸ್ ಬೆಲೆ 120 ರೂ.ಆದರೆ, ಕೆಜಿ ಕ್ಯಾರೆಟ್ 110 ರೂ.ಗೆ ಮಾರಾಟವಾಗಿದೆ. ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಕಳೆದ ವಾರ 90 ರ ಆಸುಪಾಸಿನಲ್ಲಿ ಇದ್ದ ಬೀನ್ಸ್ ಬೆಲೆ ಏಕಾಏಕಿ 110 ಕ್ಕೆ ಜಿಗಿದಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.

    100 ರೂ.ಗಡಿ ದಾಟಿದ ತರಕಾರಿಗಳ ವಿವರ (ಕೆಜಿಗೆ)
    ಟೊಮ್ಯಾಟೊ: 100-125 ರೂ.
    ಬೀನ್ಸ್: 100-120 ರೂ.
    ಕ್ಯಾರೆಟ್: 100- 110 ರೂ.
    ಹಸಿಮೆಣಸಿನಕಾಯಿ: 170 ರೂ.
    ಹಸಿ ಬಟಾಣಿ: 190 ರೂ.
    ಬೀನ್ಸ್ ಕಾಳು: 110 ರೂ.                                                                                                                        ಅವರೆಬೇಳೆ: 375 ರೂ
    ಸ್ವೀಟ್ ಕಾರ್ನ್: 100 ರೂ
    ಕಡಲೆಕಾಯಿ: 99 ರೂ
    ಹಸಿ ಶುಂಠಿ: 320 ರೂ

    ನೀವು ತಲೆನೋವಿನೊಂದಿಗೆ ಬೆಳಗ್ಗೆ ಎಚ್ಚರಗೊಳ್ಳುತ್ತೀರಾ? ಹಾಗಾದ್ರೆ ವೈದ್ಯರನ್ನು ಸಂಪರ್ಕಿಸಲು ತಡ ಮಾಡಬೇಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts