ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಮುನ್ನಾದಿನವೇ ಆಡುವ 11ರ ಬಳಗ ಪ್ರಕಟಿಸಿದ ಟೀಮ್ ಇಂಡಿಯಾ

team india web
Published on

ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ಶುಕ್ರವಾರದಿಂದ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಮುನ್ನಾದಿನವಾದ ಗುರುವಾರವೇ ಭಾರತದ ಆಡುವ 11ರ ಬಳಗವನ್ನು ಪ್ರಕಟಿಸಲಾಗಿದೆ. ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಇಬ್ಬರನ್ನೂ ಆಡಿಸುವ ಮೂಲಕ ಭಾರತ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ.

ಅಚ್ಚರಿಯ ಆಯ್ಕೆಗಳಿಲ್ಲದ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳು ಮತ್ತು ಮೂವರು ವೇಗಿಗಳನ್ನು ಒಳಗೊಂಡ ಐವರು ಬೌಲರ್‌ಗಳ ಬಲವಿದೆ. ಜಡೇಜಾ, ಅಶ್ವಿನ್ ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲವರಾಗಿದ್ದು, ಆಲ್ರೌಂಡರ್‌ಗಳ ಪಾತ್ರವನ್ನೂ ನಿಭಾಯಿಸಲಿದ್ದಾರೆ. ಹನುಮ ವಿಹಾರಿ, ಮೊಹಮದ್ ಸಿರಾಜ್, ವೃದ್ಧಿಮಾನ್ ಸಾಹ ಮತ್ತು ಉಮೇಶ್ ಯಾದವ್ ಆಡುವ ಬಳಗದಿಂದ ಹೊರಗುಳಿದಿರುವ 15ರ ಬಳಗದ ಸದಸ್ಯರು. ಇಶಾಂತ್ ಶರ್ಮ, ಮೊಹಮದ್ ಶಮಿ ಮತ್ತು ಜಸ್‌ಪ್ರೀತ್ ಬುಮ್ರಾ ಕಣಕ್ಕಿಳಿಯಲಿರುವ ಮೂವರು ವೇಗಿಗಳಾಗಿದ್ದಾರೆ.

ಭಾರತದ ಆಡುವ 11ರ ಬಳಗ: ರೋಹಿತ್ ಶರ್ಮ, ಶುಭಮಾನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ರವೀಂದ್ರ ಜಡೇಜಾ, ಆರ್. ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮದ್ ಶಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net