ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಇರಲ್ಲ, ವಾರಾಂತ್ಯದ ರಜೆಯೂ ಇಲ್ಲ

Parliament 1 2 MAR 20
Published on

ನವದೆಹಲಿ: ಕೋವಿಡ್ 19 ಸಂಕಷ್ಟದ ಸನ್ನಿವೇಶದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು, ಈ ಸಲ ಪ್ರಶ್ನೋತ್ತರ ಅವಧಿ ಮತ್ತು ಪ್ರೈವೇಟ್ ಮೆಂಬರ್ಸ್ ಬಿಜಿನೆಸ್ ಇರುವುದಿಲ್ಲ ಎಂದು ರಾಜ್ಯಸಭಾ ಸಚಿಲಾಯದ ಅಧಿಸೂಚನೆ ತಿಳಿಸಿದೆ. ಆದಾಗ್ಯೂ, ಶೂನ್ಯವೇಳೆ ಮತ್ತು ಇತರೆ ಕಲಾಪಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಅದು ಸ್ಪಷ್ಟಪಡಿಸಿದೆ.

ಈ ಸಲದ ಮುಂಗಾರು ಅಧಿವೇಶನ ಸಂಸತ್ತಿನಲ್ಲಿ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1 ರ ತನಕ ನಡೆಯಲಿದೆ. ಕಲಾಪಕ್ಕೆ ಹಾಜರಾಗುವವರೆಲ್ಲರೂ ಕೋವಿಡ್ ಟೆಸ್ಟ್​ಗೆ ಒಳಗಾಗುವುದು ಸೇರಿ ಕರೊನಾ ವೈರಸ್​ ನಿಯಮಗಳನ್ನು ಪಾಲಿಸಬೇಕು.

ಎಎನ್​ಐ ವರದಿ ಪ್ರಕಾರ, ವಾರಂತ್ಯವೂ ರಜೆ ಇರಲ್ಲ. ಉಭಯ ಸದನಗಳ ಕಲಾಪ ನಿತ್ಯವೂ ನಡೆಯಲಿದೆ. ಮೊದಲ ದಿನ (ಸೆಪ್ಟೆಂಬರ್ 14) ಲೋಕಸಭೆಯ ಕಲಾಪ ಬೆಳಗ್ಗೆ 9ರಿಂದ ಅಪರಾಹ್ನ 1 ಗಂಟೆ ತನಕ, ರಾಜ್ಯಸಭೆಯ ಕಲಾಪ ಅಪರಾಹ್ನ 3 ರಿಂದ ರಾತ್ರಿ 7ರ ತನಕ ನಡೆಯಲಿದೆ. ಆನಂತರದ ದಿನಗಳಲ್ಲಿ ರಾಜ್ಯಸಭೆಯ ಕಲಾಪ ಬೆಳಗ್ಗೆಯೂ, ಲೋಕಸಭೆಯ ಕಲಾಪ ಅಪರಾಹ್ನವೂ ನಡೆಯಲಿದೆ. ಉಭಯ ಸದನಗಳು ನಿತ್ಯವೂ ನಾಲ್ಕು ಗಂಟೆ ಕಲಾಪ ನಡೆಸಲಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net