

Tala : ಇಂಡಿಯನ್ ಪ್ರೀಮಿಯರ್ ಲೀಗ್(IPL 2025)ನ 18ನೇ ಆವೃತ್ತಿಯಲ್ಲಿ ಇದಾಗಲೇ ಹಲವು ತಂಡಗಳು ಅಂಕಪಟ್ಟಿಯಲ್ಲಿ ಆಗ್ರಸ್ಥಾನಕ್ಕೆ ಮತ್ತು ಮೇಲಿನ ನಾಲ್ಕು ಸ್ಥಾನಗಳಲ್ಲಿ ಉಳಿದುಕೊಳ್ಳಬೇಕು ಪೈಪೋಟಿ ನಡೆಯುತ್ತಿದೆ. ಅದರೆ, ಈ ಬಾರಿಯ ಐಪಿಎಲ್ನಲ್ಲಿ ಐದು ಬಾರಿ ಚಾಂಪಿಯನ್ಸ್ ಚೈನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಆಟದಿಂದ ಅಂಕಪಟ್ಟಿಯಲ್ಲಿ ಪ್ರಸ್ತುತ 9 ಸ್ಥಾನದಲ್ಲಿದೆ.
ಇದನ್ನೇ ಗುರಿಯಾಗಿಟ್ಟುಕೊಂಡಿರುವ ಕೆಲ ಟ್ರೋಲ್ಸ್ ಮತ್ತು ಮಿಮ್ಸ್ ಪೇಜ್ಗಳು ಮಹೇಂದ್ರ ಸಿಂಗ್ ಧೋನಿ ಮತ್ತು ಸಿಎಸ್ಕೆ ಆಟಗಾರ ಅಂಬಟಿ ರಾಯುಡು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಳ್ಳುವುದಲ್ಲದೆ ವಲ್ಗರ್(ಬೈಗುಳ) ಪದಗಳು ಬಳಸಿದ್ದಾರೆ. ಅಲ್ಲದೆ ನನ್ನ ಮೇಲೆ ವೈಯಕ್ತಿಕ ದ್ವೇಷದ ದಾಳಿ ಮಾಡಿದ್ದಾರೆ ಎಂದು ರಾಯುಡು ಆರೋಪಿಸುವ ಮೂಲಕ ಬಹಿರಂಗವಾಗಿ ಇದೀಗ ಮಾತನಾಡಿದ್ದಾರೆ.
ಅಂಬಟಿ ರಾಯುಡು ಟೀಕಾಕರರ ವಿರುದ್ಧ ತಮ್ಮ ಎಕ್ಸ್(ಟ್ವಿಟರ್) ಖಾತೆಯಲ್ಲಿ ಹರಿಹಾಯುವ ಮೂಲಕ '' ನಾನು ತಲಾ(ಧೋನಿ)ಫ್ಯಾನ್'' ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.
''ನಾನು ತಲಾ ಅವರ ಅಭಿಮಾನಿಯಾಗದ್ದೆ. ನಾನು ಈಗಲೂ ಅವರ ಅಭಿಮಾನಿ, ಮುಂದೆಯೂ ಅವರ ಫ್ಯಾನ್ ಆಗಿರುತ್ತೇನೆ. ಯಾರು ಏನು ಯೋಚನೆ ಮತ್ತು ಏನು ಮಾಡಿದರೂ ಅದು ಬದಲಾಗುವುದಿಲ್ಲ. ಇದು ಒಂದು ಶೇಕಡದಷ್ಟು ಬದಲಾಗಲ್ಲ. ಆದ್ದರಿಂದ ನನ್ನ ಬಗ್ಗೆ ಪೇಡ್ ಪ್ರಮೋಷನ್ ನಿಲ್ಲಿಸಿ. ಅದರ ಬದಲು ಅದೇ ದುಡ್ಡ ಅನ್ನು ಬಡವರಿಗೆ ದಾನ ಮಾಡಿ'' ಎಂದು ಹೇಳಿದ್ದಾರೆ.
ಎಂಎಸ್ ಧೋನಿ ಬ್ಯಾಟ್ ಅಲ್ಲ, ಕತ್ತಿಯೊಂದಿಗೆ ಹೊರಬರುತ್ತಿದ್ದಾರೆ. ಇಂದು ರಾತ್ರಿ ಕತ್ತಿಯನ್ನು ಪ್ರಯೋಗಿಸಲಾಗುವುದು ಮತ್ತು ಧೋನಿಯ ಕತ್ತಿಯನ್ನು ಪ್ರಯೋಗಿಸಲಾಗುವುದು'' ಎಂದು ರಾಯುಡು ಮೊನ್ನೆ ನಡೆದ ಪಂಜಾಬ್- ಸಿಎಸ್ಕೆ ಪಂದ್ಯದ ವೇಳೆ ಹೇಳಿದ್ದರು. ಸಿಎಸ್ಕೆ ಪಂದ್ಯ ಸೋತ ಬಳಿಕ ಅಭಿಮಾನಿಗಳು ರಾಯುಡು ಅವರನ್ನು ಹಿಗ್ಗಾಮುಗ್ಗಾ ತರಾಟೆಕೊಂಡಿದ್ದರು. (ಏಜೆನ್ಸೀಸ್)