ಯಾವುದೇ ಉದ್ದೇಶವಿಲ್ಲ, ರನ್​ಗಳಿಲ್ಲ... ದುಲೀಪ್​​ ಟ್ರೋಫಿಯಲ್ಲಿ ರಾಹುಲ್​ ಫೇಲ್​, ಕ್ರೀಡಾಭಿಮಾನಿಗಳಿಂದ ಹೀನಾಯ ಟ್ರೋಲ್​

KL Rahul
Published on

ಬೆಂಗಳೂರು: ಬಾಂಗ್ಲಾದೇಶ ಸೇರಿದಂತೆ ಮುಂಬರುವ ಅಂತಾರಾಷ್ಟ್ರೀಯ ಸರಣಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವೆ ದಿನ ಕಳೆದಂತೆ ಪೈಪೋಟಿ ಹೆಚ್ಚಾಗುತ್ತಿದ್ದು, ಬ್ಯಾಟರ್​ಗಳು ಬ್ಯಾಕ್​ ಟು ಬ್ಯಾಕ್​ ಶತಕಗಳನ್ನು ಸಿಡಿಸುವ ಮೂಲಕ ಆಯ್ಕೆಗಾರರ ಗಮನ ಸೆಳೆಯುತ್ತಿದ್ದಾರೆ. ಆದರೆ, ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​, ಅನುಭವಿ ಆಟಗಾರ, ಕನ್ನಡಿಗ ಕೆ.ಎಲ್​. ರಾಹುಲ್​​ಗೆ​ ಮಾತ್ರ ರನ್​ ಗಳಿಕೆಗೆ ಪರದಾಟ ಮುಂದುವರೆದಿದ್ದು, ಇದಕ್ಕೆ ಹಾಲಿ ನಡೆಯುತ್ತಿರುವ ದುಲೀಪ್​ ಟ್ರೋಫಿ ಸಾಕ್ಷಿಯಾಗಿದೆ.

ದುಲೀಪ್​ ಟ್ರೋಫಿಯಲ್ಲಿ ಶುಭಮನ್​ ಗಿಲ್​ ನೇತೃತ್ವದ ಭಾರತ ಎ ತಂಡದ ಪರ ಆಡುತ್ತಿರುವ ರಾಹುಲ್​ 111 ಎಸೆತಗಳನ್ನು ಎದುರಿಸಿ 37 ರನ್​ ಗಳಿಸಿದರು. ರಾಹುಲ್​ ರನ್​ ಗಳಿಸಲು ಪರದಾಡುತ್ತಿರುವ ಮತ್ತು ಔಟಾದ ರೀತಿ ಕಂಡು ಫ್ಯಾನ್ಸ್​ ಕಿಡಿಕಾರಿದ್ದು, ಕ್ರಿಕೆಟಿಗನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್​ಗಳನ್ನು ಹಂಚಿಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ದುಲೀಪ್ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳ ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಗೆ ರಾಹುಲ್​ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿದ್ದು, ಅವರ ಫಾರ್ಮ್​ ನೋಡಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಿದ್ದಾರೆ.

ಬ್ಯಾಟಿಂಗ್​​ ಪಿಚ್​ನಲ್ಲಿ ಯಾವುದೇ ಉದ್ಧೇಶವಿಲ್ಲದೇ, ಯಾವುದೇ ರನ್​ ಗಳಿಸದೆ ಇರುವವರು ಇವರೇ ನೋಡಿ. ಯಾರಾದರೂ ಕ್ರಿಕೆಟ್ ನೋಡುವುದನ್ನು ನಿಲ್ಲಿಸಬೇಕೆಂದರೆ ದಯವಿಟ್ಟು ಅವರಿಗೆ ಕೆ.ಎಲ್. ರಾಹುಲ್​ ಬ್ಯಾಟಿಂಗ್​ ವೈಖರಿಯನ್ನು ಒಮ್ಮೆ ತೋರಿಸಿ ನೀವು ಖಿನ್ನತೆಗೆ ಹೋಗುತ್ತೀರಾ. ಈ ವಿಚಾರದಲ್ಲಿ ನಾನು ಬೆಟ್​ ಮಾಡಲು ಸಿದ್ದ. ಸರ್ಫರಾಜ್​ ಅಂತಹವರು ಈ ಪಿಚ್​ನಲ್ಲಿ ಟಿ20 ಕ್ರಿಕೆಟ್​ ಆಡುತ್ತಿದ್ದರೆ. ರಾಹುಲ್​ನಂತಹವರು ಈ ಪಿಚ್​ ತುಂಬಾ ಸ್ಲೋ ಇದ್ದು, ರನ್​ ಗಳಿಸಲು ಕಷ್ಟವಾಗುತ್ತದೆ ಎಂದು ರಾಹುಲ್​ ನನಗೆ ತೋರಿಸಿಕೊಟ್ಟರು ಎಂದು ಕ್ರೀಡಾಭಿಮಾನಿಗಳು ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net