More

    ಪಾಕ್‌ ಆಟಗಾರರು ಐಪಿಎಲ್‌ ಆಡ್ಬೇಕಂತೆ…! ಸಖತ್ ಟಾಂಗ್​ ಕೊಟ್ಟ ಹರ್ಭಜನ್‌ ಸಿಂಗ್‌

    ನವದೆಹಲಿ: 2008 ರಿಂದ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಶ್ರೀಮಂತ ಲೀಗ್. ಯುವ ಪ್ರತಿಭೆಗಳನ್ನು ಸ್ಟಾರ್‌ ಆಟಗಾರರನ್ನಾಗಿ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕೂಡ ಐಪಿಎಲ್​ಗೆ ಸಲ್ಲಬೇಕು. ಅನೇಕ ಆಟಗಾರರು ಐಪಿಎಲ್​ ಮೂಲಕವೇ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಇದೇ ಕಾರಣದಿಂದಾಗಿ ಯುವ ಆಟಗಾರರು ಕೂಡ ಐಪಿಎಲ್​ನಲ್ಲಿ ಭಾಗವಹಿಸುವುದನ್ನು ಎದುರು ನೋಡುತ್ತಿರುತ್ತಾರೆ.

    ಇದನ್ನೂ ಓದಿ: ಬಿಜೆಪಿ ಲೋಕಸಭೆ ಟಿಕೆಟ್ ವಂಚಿತರು ಕಾಂಗ್ರೆಸ್​​ಗೆ ಬರ್ತಾರಾ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಿವಾನಂದ ಪಾಟೀಲ್!

    ಅದರಂತೆ ಐಸಿಸಿ ಸ್ಥಾನಮಾನ ಹೊಂದಿರುವ ಬಹುತೇಕ ರಾಷ್ಟ್ರಗಳ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಪಾಕಿಸ್ತಾನದ 11 ಸ್ಟಾರ್ ಆಟಗಾರರು 2008ರ ಐಪಿಎಲ್​ನಲ್ಲಿ ಭಾಗವಹಿಸಿದ್ದರು. ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಅವರ ಭಾಗವಹಿಸುವಿಕೆಯನ್ನು ನಿಷೇಧಿಸಲಾಗಿದೆ. ಪಾಕ್​ ಆಟಗಾರನ್ನು ಐಪಿಎಲ್​ನಿಂದ ಅವರನ್ನು ಸಂಪೂರ್ಣವಾಗಿ ಬ್ಯಾನ್​ ಕೂಡ ಮಾಡಲಾಗಿದೆ.

    ಆದರೆ ಇತ್ತೀಚೆಗೆ ಪಾಕ್ ಅಭಿಮಾನಿಯೊಬ್ಬನು ಮಾಡಿರುವ ಪೋಸ್ಟ್​ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಕೆರಳಿಸಿದೆ. ಇದನ್ನು ಕಂಡ ಸಿಂಗ್ ಪಾಕ್​ ಅಭಿಮಾನಿಯೊಬ್ಬನಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ.

    ಪಾಕ್‌ ಆಟಗಾರರು ಐಪಿಎಲ್‌ ಆಡ್ಬೇಕಂತೆ…! ಸಖತ್ ಟಾಂಗ್​ ಕೊಟ್ಟ ಹರ್ಭಜನ್‌ ಸಿಂಗ್‌

    ಪಾಕಿಸ್ತಾನದ ಅಭಿಮಾನಿಯೊಬ್ಬರು ಪಾಕಿಸ್ತಾನದ ಕ್ರಿಕೆಟಿಗರಾದ ಬಾಬರ್ ಆಜಮ್ , ಶಾಹೀನ್ ಅಫ್ರಿದಿ ಅವರ ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಪಾಕ್​ ಆಟಗಾರರು ಐಪಿಎಲ್​ನ ತಂಡಗಳಿಗೆ ಆಡುತ್ತಿದ್ದಂತೆ ಎಡಿಟ್​​ ಮಾಡಿದ್ದಾರೆ. ಬಾಬರ್​ ಅಜಮ್​ ಆರ್​ಸಿಬಿಯಾದರೆ, ಶಾಹೀನ್​ ಅಫ್ರಿದಿ ಮುಂಬೈ ಹಾಗೂ ರಿಜ್ವಾನ್​ ಸಿಎಸ್​ಕೆ ತಂಡದ ಜೆರ್ಸಿಯಲ್ಲಿ ಎಡಿಟ್ ಮಾಡಿದ್ದಾರೆ.

    ಈ ಪೋಸ್ಟ್​ ನಲ್ಲಿ ಪಾಕ್​ ಅಭಿಮಾನಿ, ಈ ಚಿತ್ರಗಳು ಅನೇಕ ಭಾರತೀಯ ಹಾಗೂ ಪಾಕ್​ ಕ್ರಿಕೆಟ್ ಅಭಿಮಾನಿಗಳ ಕನಸಾಗಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಇದೀಗ ಹರ್ಭಜನ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ನೀಡಿರುವ ಉತ್ತರ ಎಲ್ಲಡೆ ಸಖತ್​ ವೈರಲ್​ ಆಗುತ್ತಿದೆ.

    ಹರ್ಭಜನ್ ಸಿಂಗ್ ಈ ಕುರಿತು ಟ್ವೀಟ್​​ ಮಾಡಿದ್ದು, ಭಾರತೀಯರಲ್ಲಿ ಅಂತಹ ಕನಸುಗಳಿಲ್ಲ. ದಯವಿಟ್ಟು ಕನಸು ಕಾಣುವುದನ್ನು ನಿಲ್ಲಿಸಿ. ಈಗಲೇ ಎದ್ದೇಳಿ ಎಂದು ಬರೆದುಕೊಂಡಿದ್ದು, ಈ ಮೂಲಕ ಪಾಕ್​ ಅಭಿಮಾನಿಗೆ ಸಖತ್​ ಟಾಂಗ್​ ನೀಡಿದ್ದಾರೆ.

    ಭಾರತ ಮತ್ತು ಪಾಕ್​ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿ ಆಗುತ್ತಿದೆ. ಇನ್ನು ಭಾರತ ಮತ್ತು ಪಾಕಿಸ್ತಾನವು ಈ ಬಾರಿ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಪರಸ್ಪರ ಎದುರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts