ಕೆಲವರು ಬಿಜೆಪಿಯಿಂದ ಜೆಡಿಎಸ್​​ಗೆ​ ಬರ್ತಾರೆ ಅನ್ನೋದು ಇಬ್ರಾಹಿಂಗೆ ಕೇಳಿ, ನನಗೆ ಗೊತ್ತಿಲ್ಲ ಅಂದ್ರು ಎಚ್​ಡಿಕೆ

HDK
Published on

ಬಾಗಲಕೋಟೆ: 2023ರ ಚುನಾವಣೆಗೆ ಕಾಂಗ್ರೆಸ್ ಹಾಗೂ‌ ಬಿಜೆಪಿಯಿಂದ ಹಲವಾರು ನಾಯಕರು ಜೆಡಿಎಸ್ ಗೆ ಬರ್ತಾರೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್​ಡಿಕೆ ಕುಮಾರಸ್ವಾಮಿ ಈ ಬಗ್ಗೆ ನನಗೆ ಗೊತ್ತೇ ಇಲ್ಲ ಅವರ ಬಳಿಯೇ ಮಾಹಿತಿ ಕೇಳಿ ಪಡೆದುಕೊಳ್ಳಿ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಅವರು ಕಳೆದ ಎಂಟತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದಂತಹವರು, ಯಾರು ಯಾರು ಬರಬಹುದು ಎಂಬುದು ಅವರಿಗೆ ಗೊತ್ತಿರಬಹುದು. ಅವರ ಬಳಿಯೇ ಈ ವಿಷಯವನ್ನು ಕೇಳುವುದು ಸೂಕ್ತ ಎಂದು ಹೇಳಿದ್ದಾರೆ.

ನಾನು ಬೇರೆ ಪಕ್ಷದ ಮುಖಂಡರಗಳ ಜೊತೆ ಯಾರ ಬಳಿಯೂ ಚರ್ಚೆ ಮಾಡಿಲ್ಲ, ನಮ್ಮ ಪಕ್ಷಕ್ಕೆ ಬನ್ನಿ ಅಂತ ಆಹ್ವಾನವನ್ನೂ ಕೊಟ್ಟಿಲ್ಲ. ನನ್ನ ಪಕ್ಷವನ್ನ ಭದ್ರಗೊಳಿಸಬೇಕು, ನಮ್ಮ ಸಂಘಟನೆ ಭದ್ರಗೊಳಸಬೇಕು ಅನ್ನುವುದೇ ನನ್ನ ಉದ್ದೇಶ. ಬರುವ ಚುನಾವಣೆಗೆ ಹೇಗೆ ಹೋಗಬೇಕು ಅನ್ನೋದ್ರ ಬಗ್ಗೆ ಚಿಂತನೆ ಇದೆಹೊರತು ಬೇರೆ ಪಕ್ಷದ ಇಟ್ಟಿಗೆ ಕಸಿತಕ್ಕಂತ ಕೆಲಸಕ್ಕೆ ನಾನು ಹೋಗಿಲ್ಲ.ಅದೆಲ್ಲವನ್ನ ಆ ಇಬ್ಬರಿಗೆ ಬಿಜೆಪಿ, ಕಾಂಗ್ರೆಸ್ ಗೆ ಬಿಟ್ಟಿದ್ದೇನೆ, ಅವರೇ ಅದನ್ನು ಮಾಡಲಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net