

ರಾಜಸ್ಥಾನ: ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರವೆಸಗುವ ಆರೋಪಿಗಳು ಮತ್ತು ರೌಡಿ ಶೀಟರ್ ಹಿನ್ನಲೆ ಹೊಂದಿರುವವರಿಗೆ ಸರ್ಕಾರಿ ಕೆಲಸ ಲಭಿಸುವುದಿಲ್ಲ. ಅಂತವರು ಕೆಲಸ ಪಡೆಯಲು ಅರ್ಹರಲ್ಲ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಡಕ್ ಹೇಳಿಕೆ ನೀಡಿದ್ದಾರೆ.
"ಕಿರುಕುಳ, ಲೈಂಗಿಕ ದುಷ್ಕೃತ್ಯದ ಪ್ರಯತ್ನಗಳು ಮತ್ತು ಲೈಂಗಿಕ ಅಪರಾಧಗಳ ಆರೋಪದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಇತಿಹಾಸದ ಹೊಂದಿರುವ ರೌಡಿ ಶೀಟರ್ಗಳನ್ನು ಸರ್ಕಾರಿ ಉದ್ಯೋಗಗಳಿಂದ ನಿರ್ಬಂಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ" ಎಂದು ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿಯೂ ತಿಳಿಸಿದ್ದಾರೆ.
"ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾದವರ ವರದಿಗಳು ಆಯಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತದೆ. ಆರೋಪಿಗಳ ಕ್ಯಾರೆಕ್ಟರ್ ಸರ್ಟಿಫಿಕೆಟ್ ಅನ್ನು ರಾಜ್ಯ ಸರ್ಕಾರ ಅಥವಾ ಪೊಲೀಸರು ನೀಡಲಿದ್ದಾರೆ. ಇಂತಹ ಸಮಾಜವಿರೋಧಿಗಳ ಸಾಮಾಜಿಕ ಬಹಿಷ್ಕಾರದ ಅಗತ್ಯವಿದೆ" ಎಂದು ರಾಜಸ್ಥಾನ ಸಿಎಂ ಟ್ವೀಟ್ನಲ್ಲಿ ತಿಳಿಸಿದ್ದಾರೆ.