ಭಾರತ-ಪಾಕ್​ ಕದನ ವಿರಾಮ: ರಾತ್ರಿಯಿಡೀ ಸ್ಫೋಟ ಸಂಭವಿಸಿಲ್ಲ, ಗಡಿಗಳಲ್ಲಿ ಹೆಚ್ಚಿದ ಬಿಗಿ ಭದ್ರತೆ | Cease Fire

ವಿಜಯವಾಣಿ - 2025-05-11T110327.557
Published on

Cease Fire: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್​ ಮಧ್ಯಸ್ಥಿಕೆ ವಹಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಎರಡೂ ದೇಶಗಳ ನಡುವೆ ಕದನ ವಿರಾಮ ಜಾರಿಯಲ್ಲಿದ್ದು, ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಪಾಕಿಸ್ತಾನವನ್ನು ಹೊಸಕಿ ಹಾಕಲು ಸರ್ವಸನ್ನದ್ಧಗೊಂಡಿದ್ದ ಭಾರತೀಯ ಸೇನೆ, ಪಾಕ್​ನ ಬಹುತೇಕ ತಾಣಗಳನ್ನು ಡ್ರೋನ್ ಮತ್ತು ಕ್ಷಿಪಣಿ ದಾಳಿ ಮೂಲಕ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಭಾರತ ಸರ್ಕಾರ, ಮತ್ತೆ ಕುತಂತ್ರ ಬುದ್ಧಿಯನ್ನು ಪ್ರಯೋಗಿಸಲು ಮುಂದಾದರೆ ಯುದ್ಧ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂದು ಪಾಕ್​ಗೆ ಖಡಕ್ ಎಚ್ಚರಿಕೆ ರವಾನಿಸಿದೆ.

ಉದ್ವಿಗ್ನಗೊಂಡಿದ್ದ ಜಮ್ಮು-ಕಾಶ್ಮೀರ ಈಗ ಶಾಂತಿಯತ್ತ ಸಾಗುತ್ತಿದೆ. ಕದನ ವಿರಾಮ ಘೋಷಿಸಿದ ಬಳಿಕ ನಿನ್ನೆ ರಾತ್ರಿಯಿಡೀ ಯಾವುದೇ ಸ್ಫೋಟಗಳು ಅಥವಾ ಗುಂಡಿನ ದಾಳಿಗಳು ವರದಿಯಾಗಿಲ್ಲ. ಆದರೂ ಭಾರತ ಸರ್ಕಾರ ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನ ಗಡಿಗಳಲ್ಲಿ ಮತ್ತಷ್ಟು ಹೆಚ್ಚಿನ ಬಿಗಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಕದನ ವಿರಾಮ ಮುಂದುವರೆದಿದ್ದೇ ಆದರೂ ಭದ್ರತಾ ಪಡೆಗಳು ಜಾಗರೂಕವಾಗಿವೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net