

ಬೆಂಗಳೂರು: ನಗರದ ನಿವಾಸಿಯೊಬ್ಬ ಕೋವಿಡ್-19 ವರದಿ ತರದ ತನ್ನ ಹೆಂಡತಿಯನ್ನು ಮನೆಗೆ ಸೇರಿಸಲು ನಿರಾಕರಿಸಿದ್ದು, ಮಹಿಳಾ ಸಹಾಯವಾಣಿಯೊಂದರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ.
ಲಾಕ್ಡೌನ್ನಿಂದಾಗಿ ಕಳೆದ ಮೂರು ತಿಂಗಳಿಂದ ಚಂಡೀಗಢದಲ್ಲಿ ಸಿಲುಕಿಕೊಂಡಿದ್ದ ಪತ್ನಿ ಈಗ ನಗರಕ್ಕೆ ವಾಪಸಾಗಿದ್ದಾಳೆ, ಪತಿ, ಮಕ್ಕಳನ್ನು ನೋಡಲು ಉತ್ಸುಕಳಾಗಿ ಮನೆಯತ್ತ ಧಾವಿಸುತ್ತಲೇ ಪತಿಯ ಈ ಪರಿಯ ನಿರಾಕರಣೆ ಆಕೆಗೆ ಆಘಾತವನ್ನುಂಟು ಮಾಡಿದೆ.
ಕಳೆದ ವಾರ ಮಹಿಳೆ ಚಂಡೀಗಢದಿಂದ ವಾಪಸಾದ ಆಕೆಗೆ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲು ಮತ್ತು COVID-19 ನೆಗೆಟಿವ್ ವರದಿ ತರಲು ಪತಿ ತಿಳಿಸಿದ್ದಾನೆ.
ಮನೆಗೆ ಸೇರಿಸಲು ಪತಿ ನಂತರ, ಆಕೆ ಮಧ್ಯರಾತ್ರಿ ಪರಿಹಾರ್ ವನಿತಾ ಸಹಾಯವಾಣಿಯನ್ನು ಸಂಪರ್ಕಿಸಿದ್ದಾಳೆ. ಅಧಿಕಾರಿಗಳ ತಂಡ ಆಕೆಗೆ ಸಹಾಯ ಮಾಡಲು ಮಹಿಳೆಯ ಮನೆಗೆ ಹೋಯಿತು. ಆದಾಗ್ಯೂ, ತಂಡವು ಸ್ಥಳಕ್ಕೆ ತಲುಪುವ ಮೊದಲೇ ಆಕೆಯ ಪತಿ ತಮ್ಮ ಮಗನೊಂದಿಗೆ ಮನೆ ತೊರೆದಿದ್ದರು.
ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತೆ ಅಧಿಕಾರಿಗಳು ಮಹಿಳೆಗೆ ಸಲಹೆ ನೀಡಿದರೂ. ಆಕೆ ತನ್ನ ಮನೆ ಸೇರಬೇಕೆಂದೇ ಪಟ್ಟು ಹಿಡಿದಿದ್ದಳು. ಮನವೊಲಿಸಲು ಸುಸ್ತಾದ ಸಹಾಯವಾಣಿ ತಂಡದವರು ಕೊನೆಗೆ ಪತಿ ಹಿಂತಿರುಗಿದಾಗ ತಮಗೆ ತಿಳಿಸಬೇಕೆಂದು ಆಕೆಗೆ ತಿಳಿಸಿದರು. ಏತನ್ಮಧ್ಯೆ, ಮಹಿಳೆ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.
ಪತಿ ಹಿಂದಿರುಗಿದ ಮಾಹಿತಿ ಪಡೆದ ನಂತರ COVID-19 ಕುರಿತ ಸತ್ಯಮಿತ್ಯಗಳ ಕುರಿತು ಅಧಿಕಾರಿಗಳು ಆಕೆಯ ಪತಿಗೆ ಸಲಹೆ ನೀಡಿದರು ಮತ್ತು ಹೆಂಡತಿಯನ್ನು ಮನೆಗೆ ಸೇರಿಸಿಕೊಳ್ಳುವಂತೆ ಆತನ ಮನವೊಲಿಸಿದರು.
ಹಿರಿಯ ಸಲಹೆಗಾರ್ತಿ ಅಪರ್ಣಾ ಪೂರ್ಣೇಶ್ ಹೇಳುವಂತೆ ದಂಪತಿ ಆಗಾಗ ಜಗಳವಾಡುತ್ತಿದ್ದರು. ಕರೊನಾ ವೈರಸ್ನ ಈ ಸಮಯದಲ್ಲಿ ತನಗೂ ಮತ್ತು ಮಗನಿಗೆ ಆಕೆಯಿಂದ ಸೋಂಕು ತಗುಲಬಹುದೆಂಬ ಭಯದಿಂದ, ಆಕೆಯನ್ನು ಮನೆಗೆ ಸೇರಿಸಲು ನಿರಾಕರಿಸಿದ್ದ. ಈಗ, ಆಕೆ ಹೋಮ್ ಕ್ವಾರಂಟೈನ್ನಲ್ಲಿದ್ದಾಳೆ ಎಂದು ಹೇಳಿದರು.