More

    ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ ಲೋಕಸಭೆ ಸ್ಪೀಕರ್! ನೀವು ತಿಳಿದುಕೊಳ್ಳಬೇಕಾದ 10 ವಿಷಯಗಳು ಹೀಗಿವೆ…

    ನವದೆಹಲಿ: ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಬುಧವಾರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಮಂಗಳವಾರದಂದು INDIA ಮೈತ್ರಿಕೂಟ ನಿರ್ಧರಿಸಿದೆ.

    ಇದನ್ನೂ ಓದಿ: ಗೆಲ್ಲಲ್ಲ ಅಂತ ಗೊತ್ತಿದ್ರೂ ಸರ್ಕಾರದ ವಿರುದ್ಧ ಕಾಂಗ್ರೆಸ್​ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿರುವುದೇಕೆ? ಇಲ್ಲಿದೆ ಉತ್ತರ

    ಬುಧವಾರ ಬೆಳಗ್ಗೆ 9.20ಕ್ಕೆ ಸ್ಪೀಕರ್ ಕಚೇರಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಳಗ್ಗೆ 10 ಗಂಟೆಯ ಮೊದಲು ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಅದೇ ದಿನ ಅದನ್ನು ಕೈಗೆತ್ತಿಕೊಳ್ಳಲಾಗುವುದು. ಗೊಗೊಯ್ ನಂತರ BRS ಸಂಸದ ನಾಮ ನಾಗೇಶ್ವರ ರಾವ್, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಲೋಕಸಭೆ ಸ್ಪೀಕರ್ ಅವರು ಅವಿಶ್ವಾಸ ನಿರ್ಣಯವನ್ನು ಒಪ್ಪಿಕೊಂಡಿದ್ದು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿ ನಿಯಮ ಪುಸ್ತಕದ ಪ್ರಕಾರ ಚರ್ಚೆಯನ್ನು ನಿಗದಿಪಡಿಸುವುದಾಗಿ ಹೇಳಿದರು. INDIA ಮೈತ್ರಿಕೂಟದ ಎಲ್ಲಾ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದವು.

    ಇದನ್ನೂ ಓದಿ: VIRAL VIDEO | ಪ್ರಧಾನಿ, 2019ರಲ್ಲೇ ಈ ಬಾರಿಯ ಅವಿಶ್ವಾಸ ಗೊತ್ತುವಳಿ ಮಂಡನೆ ಬಗ್ಗೆ ಭವಿಷ್ಯ ನುಡಿದಿದ್ರಾ?!

    ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿಯ ನಿರ್ಣಯ: ನೀವು ತಿಳಿದುಕೊಳ್ಳಬೇಕಾದದ್ದು ಏನೇನು?

    1. ಲೋಕಸಭೆ ಸ್ಪೀಕರ್ ಅವಿಶ್ವಾಸ ನಿರ್ಣಯವನ್ನು ನಿಯಮ ಪುಸ್ತಕದ ಪ್ರಕಾರ 50 ಸಂಸದರ ಬೆಂಬಲವಿದೆಯೇ ಎಂದು ಪರಿಶೀಲಿಸಲು ಕೈಗೆತ್ತಿಕೊಂಡರು. ನಂತರ ಪ್ರಸ್ತಾವನೆ ಅಂಗೀಕರಿಸಿ ಚರ್ಚೆಗೆ ವೇಳಾಪಟ್ಟಿ ತಿಳಿಸುವುದಾಗಿ ತಿಳಿಸಿದರು.
    2. ಸಂಸದರು 50 ಸದಸ್ಯರ ಸಹಿಯನ್ನು ಹೊಂದಿದ್ದರೆ ಯಾವುದೇ ಲೋಕಸಭಾ ಸಂಸದರು ಅವಿಶ್ವಾಸ ನಿರ್ಣಯವನ್ನು ತರಬಹುದು.
    3. ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ 198ನೇ ನಿಯಮ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ವಿಧಾನವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದೆ. ಸದಸ್ಯರು ಬೆಳಿಗ್ಗೆ 10 ಗಂಟೆಗೆ ಮೊದಲು ಲಿಖಿತ ಸೂಚನೆಯನ್ನು ನೀಡಬೇಕಾಗಿದ್ದು ಅದನ್ನು ಸ್ಪೀಕರ್ ಅವರು ಸದನದಲ್ಲಿ ಓದುತ್ತಾರೆ.
    4. ನಿಗದಿಪಡಿಸಿದ ದಿನಾಂಕವು ಅವಿಶ್ವಾಸ ಗೊತ್ತುವಳಿ ಅಂಗೀಕರಿಸಿದ ದಿನದಿಂದ 10 ದಿನಗಳ ಒಳಗೆ ಇರಬೇಕು. ಇಲ್ಲದಿದ್ದಲ್ಲಿ ಪ್ರಸ್ತಾವನೆ ವಿಫಲವಾದಲ್ಲಿ ಅದನ್ನು ಮಂಡಿಸಿದ ಸದಸ್ಯರಿಗೆ ತಿಳಿಸಬೇಕು. ಸದನದಲ್ಲಿ ಬಹುಮತ ಸಾಬೀತುಪಡಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು.
    5. ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು ಇದೇ ಮೊದಲಲ್ಲ. ಆದರೆ ಪ್ರಧಾನಿ ಮೋದಿಯವರ ಎರಡನೇ ಅವಧಿಯಲ್ಲಿ ಇದು ಮೊದಲನೆಯದು.
    6. ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಮೊದಲ ಅವಿಶ್ವಾಸ ನಿರ್ಣಯವನ್ನು ಜುಲೈ 20, 2018 ರಂದು ಮಂಡಿಸಲಾಯಿತು.
    7. ಅಂದು ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (NDA)ನ 325 ಸಂಸದರು ಈ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದು ಕೇವಲ 126 ಮಂದಿ ಮಾತ್ರ ಅದನ್ನು ಬೆಂಬಲಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು.
    8. ಆಡಳಿತ ಪಕ್ಷವು ಉಭಯ ಸದನಗಳಲ್ಲಿ ಬಹುಮತವನ್ನು ಹೊಂದಿದ್ದು ಅವಿಶ್ವಾಸ ನಿರ್ಣಯವನ್ನು ವಿರೋಧ ಪಕ್ಷದ ಮೊದಲ ಪ್ರತಿಕ್ರಿಯೆಯಾಗಿ ನೋಡಲಾಗುತ್ತಿದೆ. ಸದ್ಯ ಮಣಿಪುರದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮಾತನಾಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.
    9. ಅವಿಶ್ವಾಸ ನಿರ್ಣಯವು NDA ವರ್ಸಸ್ INDIA ರಾಜಕೀಯ ಯುದ್ಧವನ್ನು ತೀವ್ರಗೊಳಿಸಿದೆ. ಪ್ರಧಾನಿ ಮೋದಿ, ಮಂಗಳವಾರ INDIA ಮತ್ತು ಈಸ್ಟ್ ಇಂಡಿಯಾ ಕಂಪನಿ ಎರಡೂ ಒಂದೇ ಎನ್ನುವಂತೆ ಚಿತ್ರಣ ನೀಡಿದ್ದು, “ದೇಶವನ್ನು ವಿಭಜಿಸಿದ ಸಂಸ್ಥೆಗಳು ತಮ್ಮ ಹೆಸರಿನಲ್ಲೂ INDIAವನ್ನು ಸಹ ಹೊಂದಿವೆ” ಎಂದು ಹೇಳಿದ್ದರು.
    10. “ಅವಿಶ್ವಾಸ ಗೊತ್ತುವಳಿ ಬರಲಿ, ಎಲ್ಲ ಪರಿಸ್ಥಿತಿಗೂ ಸರ್ಕಾರ ಸಿದ್ಧವಿದೆ. ನಾವು ಮಣಿಪುರದ ಬಗ್ಗೆ ಚರ್ಚೆಯನ್ನು ಬಯಸುತ್ತೇವೆ. ಅಧಿವೇಶನದ ಆರಂಭದ ಮೊದಲು ಅವರು ಚರ್ಚೆಯನ್ನು ಬಯಸಿದ್ದರು. ನಾವು ಒಪ್ಪಿದಾಗ, ಅವರು ನಿಯಮಗಳ ಸಮಸ್ಯೆಯನ್ನು ತಂದರು. ನಾವು ನಿಯಮಗಳ ಕುರಿತು ಒಪ್ಪಂದಕ್ಕೆ ಬಂದಾಗ, ಅವರು ಪ್ರಧಾನಿ ಬಂದು ಚರ್ಚೆಯನ್ನು ಪ್ರಾರಂಭಿಸಬೇಕಿ ಎನ್ನುವ ಹೊಸ ವಿಷಯವನ್ನು ತಂದರು. ಇವೆಲ್ಲವೂ ನೆಪಗಳು ಎಂದು ನಾನು ಭಾವಿಸುತ್ತೇನೆ” ಎಂದು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts