

ನವದೆಹಲಿ: ವಿಶ್ವ ಕ್ರಿಕೆಟ್ನಲ್ಲಿ ಭಾರತದ ಪುರುಷರ ತಂಡಕ್ಕೆ ಅದರದೇ ಆದ ಗೌರವವಿದೆ. ಇದೀಗ ಭಾರತ ಮಹಿಳಾ ತಂಡಕ್ಕೂ ಇಂಥದ್ದೇ ಗೌರವ ಲಭಿಸುತ್ತಿದ್ದು, ಯಾರೂ ನಮ್ಮ ತಂಡವನ್ನು ಲಘುವಾಗಿ ಪರಿಗಣಿಸುತ್ತಿಲ್ಲ ಎಂದು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಇನ್ನೂ ವಿಶ್ವಕಪ್ ಜಯಿಸದಿದ್ದರೂ, ಬಲಿಷ್ಠ ತಂಡ ಎನ್ನು ವುದರಲ್ಲಿ ಅನುಮಾನವಿಲ್ಲ. ವಿಶ್ವದ ಅತ್ಯುತ್ತಮ ತಂಡಗಳನ್ನು ಸತತವಾಗಿ ಮಣಿಸುತ್ತ ಬಂದಿದೆ. ಏಕದಿನ ದಲ್ಲಿ ಆಸ್ಟ್ರೇಲಿಯಾ ಮತ್ತು ಟಿ20ಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿರುವುದು ನಮ್ಮ ತಂಡದ ವಿಶ್ವಾಸ
ಹೆಚ್ಚಿಸಿದೆ ಎಂದು ಮಿಥಾಲಿ ಹೇಳಿದ್ದಾರೆ. 2005 ಹಾಗೂ 2017ರ ಏಕದಿನ ಹಾಗೂ 2020ರ ಟಿ20 ವಿಶ್ವಕಪ್ನಲ್ಲಿ ಭಾರತ ಫೈನಲ್ ಪ್ರವೇಶಿಸಿ ರನ್ನರ್ಅಪ್ ಆಗಿದೆ. ಈಗಾಗಲೆ ಟಿ20 ಕ್ರಿಕೆಟ್ನಿಂದ ನಿವೃತ್ತರಾಗಿರುವ ಮಿಥಾಲಿ, ಏಕದಿನದಲ್ಲಿ ಮಾತ್ರ ಮುಂದುವರಿದಿದ್ದಾರೆ. 2021ರ ಏಕದಿನ ವಿಶ್ವಕಪ್ ಗೆದ್ದು ವಿದಾಯ ಹೇಳುವುದು ಅವರ ಹಂಬಲವಾಗಿದೆ.