ಕೃಷಿ ಜಮೀನಿನಲ್ಲಿ ನಿರ್ಮಿತ ಕಟ್ಟಡಕ್ಕಿಲ್ಲ ಖಾತಾ: ಬಿಬಿಎಂಪಿ ಮುಖ್ಯ ಆಯುಕ್ತರ ಹೇಳಿಕೆ

blank

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿಯಲ್ಲಿರುವ ಯಾವುದೇ ಕೃಷಿ ಜಮೀನು, ಅನುಮೋದಿತವಲ್ಲದ ಲೇಔಟ್‌ಗಳಲ್ಲಿ ನಿರ್ಮಿಸುವ ಅಥವಾ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಖಾತಾ ನೀಡದಿರಲು ಪಾಲಿಕೆ ನಿರ್ಧರಿಸಿದೆ.

ಈ ಹಿಂದೆ 5 ಎಕರೆವರೆಗಿನ ಏಕ ನಿವೇಶನಕ್ಕೆ (ಸಿಂಗಲ್ ಪ್ಲಾಟ್) ಪಾಲಿಕೆಯೇ ಖಾತಾ ವಿತರಿಸುತಿತ್ತು. ಆದರೆ, ಆ ಜಾಗವು ಕೃಷಿ ಜಮೀನು ಆಗಿದೆಯೇ, ಇಲ್ಲವೆ ಎಂಬುದನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂಬದನ್ನು ಖಾತ್ರಿ ಮಾಡಲಾಗುತ್ತಿರಲಿಲ್ಲ. ಆ ಕಾರ್ಯವನ್ನು ಬಿಡಿಎ ಮಾಡುತ್ತಿದ್ದು, ಪಾಲಿಕೆ ನೇರವಾಗಿ ಖಾತಾ ವಿತರಿಸುತ್ತಿತ್ತು. ಆದರೆ, ಡಿಸಿಪಿ ಅನ್ವಯ ಬಡಾವಣೆ ನಿರ್ಮಿಸಲಾಗಿದೆಯೇ, ಪಾರ್ಕ್/ಉದ್ಯಾನಕ್ಕೆ ಜಾಗ ಮೀಸಲು ಇಟ್ಟಿರುವುದನ್ನು ಪರಾಮರ್ಶಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವ್ಯವಸ್ಥಿತ ಅಭಿವೃದ್ಧಿಗಾಗಿ ಕೃಷಿ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಯೋಜನಾ ಪ್ರಾಧಿಕಾರದ ಒಪ್ಪಿಗೆ ಅಗತ್ಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ಪ್ರಸ್ತುತ ಇಂತಹ ಜಮೀನಿನಲ್ಲಿ ಕಟ್ಟಡ ನಿರ್ಮಿಸುತ್ತಿರುವ ಹಾಗೂ ಇನ್ನಷ್ಟೇ ಬಿಲ್ಡಿಂಗ್ ಕಟ್ಟುವವರಿಗೆ ಪಾಲಿಕೆ ವತಿಯಿಂದ ‘ಎ’ ಅಥವಾ ‘ಬಿ’ ಖಾತಾ ನೀಡುವುದಿಲ್ಲ. ಆದರೆ, ಬಿಡಿಎಯಿಂದ ಅನುಮೋದನೆ ಪಡೆದುಬಂದಲ್ಲಿ ಬಿ ಖಾತಾ ನೀಡಲಾಗುವುದು. ನಿಯಮಗಳನ್ನಾಧರಿಸಿ ನಂತರದಲ್ಲಿ ‘ಎ’ ಖಾತಾ ವಿತರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಸರ್ವೆಗೆ 70 ಇಂಜಿನಿಯರ್ಸ್‌ ಬಳಕೆ:

ನಗರದಲ್ಲಿ ಅನಧಿಕೃತ ಕಟ್ಟಡಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಕಳೆದ ಬುಧವಾರ ಚಾಲನೆ ಸಿಕ್ಕಿದೆ. ರಜೆ ಕಾರಣ ಸೋಮವಾರದಿಂದ ವೇಗ ನೀಡಲಾಗುತ್ತಿದೆ. ಈ 70 ಇಂಜಿನಿಯರ್‌ಗಳನ್ನು ಏಜೆನ್ಸಿ ಮೂಲಕ ಖಾಸಗಿಯಿಂದ ಪಡೆಯಲಾಗಿದೆ. ಜತೆಗೆ ಪಾಲಿಕೆ ಎಇ, ಎಇಇ ಅವರೊಂದಿಗೆ ಸೇರಿ ಸರ್ವೆ ಕಾರ್ಯ ನಡೆಸಲಾಗುವುದು. ಸದ್ಯ 200 ಅನಧಿಕೃತ ಕಟ್ಟಡಗಳು ಪತ್ತೆಯಾಗಿದ್ದು, ವಾರದೊಳಗೆ ಇನ್ನಷ್ಟು ಬಿಲ್ಡಿಂಗ್‌ಗಳು ಈ ಪಟ್ಟಿ ಸೇರುವ ಸಾಧ್ಯತೆ ಇದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.

ಮರ ಕಟಾವು ವರದಿ ಶೀಘ್ರ:

ಎಚ್‌ಎಂಟಿ ಕಾರ್ಖಾನೆ ಆವರಣದಲ್ಲಿ ಮರಗಳನ್ನು ಕಡಿದುಹಾಕಿರುವ ಪ್ರಕರಣದ ಬಗ್ಗೆ ಅರಣ್ಯ ಇಲಾಖೆಯು ಪಾಲಿಕೆಯಿಂದ ವರದಿ ಕೋರಿದೆ. ಅದನ್ವಯ ಪಾಲಿಕೆಯ ಡಿಸಿಎಫ್​ ಸ್ಥಳಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ ಬಳಿಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮರ ಕತ್ತರಿಸಿರುವ ವಿಷಯ ಮಾತ್ರ ಪಾಲಿಕೆಗೆ ಸಂಬಂಧಿಸಿದ್ದೇ ಹೊರತು ಅಲ್ಲಿನ ಜಾಗದ ತಗಾದೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

Share This Article

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…