More

  ಪೊಲೀಸರೊಂದಿಗೆ ಖ್ಯಾತ ನಟಿಯ ಕಿರಿಕ್​; ಇದು ನಿಜಾನಾ ಅಥವಾ ಪಬ್ಲಿಸಿಟಿ ಗಿಮಿಕಾ​ ಎಂದು ಪ್ರಶ್ನಿಸಿದ ನೆಟ್ಟಿಗರು

  ಚೆನ್ನೈ: ಕೆಲವು ಸೆಲೆಬ್ರಿಟಿಗಳಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು ಎಂದು ಹೇಳಿದರೆ ತಪ್ಪಾಗಲಾರದು. ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯಾದರೂ ಅದು ಸಖತ್‌ ವೈರಲ್‌ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿ ನಿವೇತಾ ಪೇತುರಾಜ್​ ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

  ನಟಿ ನಿವೇತಾ ಪೇತುರಾಜ್​ ಸೌತ್​ ಸಿನಿ ಇಂಡಸ್ಟ್ರಿಯ ಟಾಪ್​ ಹೀರೋಯಿನ್​ಗಳ ಪೈಕಿ ಒಬ್ಬರೆಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅವರ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಆದರೆ, ಅವರಿಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

  ಇದನ್ನೂ ಓದಿ: ಮದುವೆಯಾದ ಎರಡನೇ ದಿನಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವತಿ; ಪೊಲೀಸ್​ ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ವಿಚಾರ

  ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ನಟಿ ನಿವೇತಾ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಪೊಲೀಸರು ನಿವೇತಾ ಅವರಿಗೆ ಕಾರಿನ ಡಿಕ್ಕಿ ತೆರೆಯುವಂತೆ ಸೂಚಿಸುತ್ತಾರೆ. ಇದಕ್ಕೆ ಆಕ್ಷೇಪಿಸುವ ನಟಿ ಕಾರಿನ ಟ್ರಂಕ್​ ತೆರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಈ ವೇಳೆ ಇದೇ ವಿಚಾರವಾಗಿ ಪೊಲೀಸರು ಹಾಗೂ ನಟಿಯ ನಡುವೆ ದೊಡ್ಡ ವಾಗ್ವಾದವೇ ಆಗಿ ಬಿಡುತ್ತದೆ. ಪೊಲೀಸರು ಮತ್ತು ನಿವೇತಾ ಅವರ ನಡುವಿನ ವಾಗ್ವಾದದ ದೃಶ್ಯವನ್ನು ರೆಕಾರ್ಡ್‌ ಮಾಡುತ್ತಿದ್ದ ವ್ಯಕ್ತಿಗೂ ಆ ಸಂದರ್ಭದಲ್ಲಿ ನಟಿ ತರಾಟೆಗೆ ತೆಗೆದುಕೊಳ್ಳುತ್ತಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  See also  11ನೇ ತರಗತಿ ಫೇಲ್​ ಆಗಿದ್ದ ಯುವತಿ ಇಂದು ಡೆಪ್ಯೂಟಿ ಕಮಿಷನರ್​; ಯುವ ಆಕಾಂಕ್ಷಿಗಳಿಗೆ ಸ್ಪೂರ್ತಿಯಾದ ರೈತನ ಮಗಳ ಕಥೆಯಿದು

  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದು, ಬಿಡುಗಡೆಯಾದ 24 ಗಂಟೆಯಲ್ಲಿ 5ಲಕ್ಷಕ್ಕೂ ಅಧಿಕ ಭಾರಿ ವೀಕ್ಷಣೆಗೆ ಒಳಪಟ್ಟಿದೆ. ವಿಡಿಯೋದಲ್ಲಿ ಪೊಲೀಸರು ಕಾಲಿಗೆ ಕ್ರಾಕ್ಸ್‌ ಧರಿಸಿದ್ದ ಕಾರಣ ನೆಟ್ಟಿಗರು ಇದೆಲ್ಲಾ ಪಬ್ಲಿಸಿಟಿ ಸ್ಟಂಟ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಹೀಗಿದ್ದರೂ ನಟಿಯಾಗಲಿ ಅಥವಾ ಪೊಲೀಸ್​ ಇಲಾಖೆಯಾಗಲಿ ಈ ವಿಡಿಯೋದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts