ರೀಲ್ಸ್​ ಮೂಲಕ ಗುಡ್​ ನ್ಯೂಸ್​ ಕೊಟ್ರಾ ಚಂದನ್ ಶೆಟ್ಟಿ? ತಾಯಿಯಾಗ್ತಿದ್ದಾರಾ ನಿವೇದಿತಾ ಗೌಡ!?

Niveditha Gowda
Published on

ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಎಂಬ ಪ್ರಶ್ನೆ ಇದೀಗ ಅವರ ಅಭಿಮಾನಿ ವಲಯದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಚಂದನ್ ಶೆಟ್ಟಿ ಹಂಚಿಕೊಂಡಿರುವ ರೀಲ್ಸ್.

ಹೌದು, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಈ ಹಿಂದೆ ಸಾಕಷ್ಟು ರೀಲ್ಸ್​ ಮಾಡಿ ಸುದ್ದಿಯಾಗಿದ್ದರು. ಇದೀಗ ಚಂದನ್ ಶೆಟ್ಟಿ ರೀಲ್ಸ್​ ಒಂದನ್ನು ಅಪ್ಲೋಡ್ ಮಾಡಿ ತಾವು ತಂದೆಯಾಗುತ್ತಿರುವ ಸುಳಿವು ನೀಡಿದ್ದಾರೆ.

ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಬಳಿ Fat + Her ಅಂದರೆ ಏನೆಂದು ಕೇಳುತ್ತಾರೆ. ಇದಕ್ಕೆ ಉತ್ತರ ನಿವೇದಿತಾ 'ಫಾದರ್' ಎಂದಿದ್ದಾರೆ. ಈ ರೀಲ್ಸ್​ ನೋಡಿದ ಅಭಿಮಾನಿಗಳು ಶುಭಾಶಯ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಇವರಿಬ್ಬರ ಈ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಬಿಗ್​ಬಾಸ್​ನಲ್ಲಿ ಮೊದಲ ಬಾರಿಗೆ ಪರಿಚಿತರಾಗಿದ್ದರು. ಇಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಮನೆಯವರ ಒಪ್ಪಿಗೆಯಂತೆ 2020ರಲ್ಲಿ ವಿವಾಹವಾಗಿದ್ದರು. ವಿವಾಹದ ನಂತರ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ, ರಿಯಾಲಿಟಿ ಶೋ ಜಡ್ಜ್​ ಆಗಿ ಬಿಝಿಯಾಗಿದ್ದರು. ಇತ್ತ ನಿವೇದಿತಾ ಗೌಡ ಮದುವೆಯ ನಂತರ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಜತೆಗೆ ಸಮಯ ಸಿಕ್ಕಾಗೆಲ್ಲಾ ವಿಭಿನ್ನ ಬಗೆಯ ರೀಲ್ಸ್ ಮಾಡಿ ಸುದ್ದಿಯಾಗುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net