​ ನಿತೀಶ್​ ಕುಮಾರ್ ರೆಡ್ಡಿಗೆ ಪೆಟ್ಟಿನ ಮೇಲೆ ಪೆಟ್ಟು!; ಅಷ್ಟಕ್ಕೂ ಆಗಿದ್ದೇನು..? | Nitish Kumar Reddy

Nitish Reddy
Published on

Nitish Kumar Reddy: ಇಂಗ್ಲೆಂಡ್‌ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ಸರಣಿಯಿಂದ ಹೊರ ಬಿದ್ದಿರುವ ನಿತೀಶ್​ ಕುಮಾರ್ ರೆಡ್ಡಿ ಈಗ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.

ತಮ್ಮ ಹಿಂದಿನ ಏಜೆಂಟ್ ಸ್ಕ್ವೇರ್ ದಿ ಒನ್ 5 ಕೋಟಿ ರೂಪಾಯಿ ಬಾಕಿ ಪಾವತಿಸುವಂತೆ ನಿರ್ವಹಣಾ ಒಪ್ಪಂದದ ಉಲ್ಲಂಘನೆ ಮತ್ತು ಬಾಕಿ ಪಾವತಿಸದ ಆರೋಪದ ಮೇಲೆ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 11(6) ರ ಅಡಿಯಲ್ಲಿ ಅರ್ಜಿ ಸಲ್ಲಿಸಿದೆ. ಈ ಪ್ರಕರಣವು ಜುಲೈ 28 ರಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದ್ದು ,ಈ ಪ್ರಕರಣ ಗಾಯದ ನೋವಿನಲ್ಲಿದ್ದ ರೆಡ್ಡಿಗೆ ಹೊಸ ಸಂಕಷ್ಟ ತಂದೊಡ್ಡಿದೆ.

2024-25ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ರೆಡ್ಡಿ ಹೊಸ ವ್ಯವಸ್ಥಾಪಕರನ್ನು ಆಯ್ಕೆ ಮಾಡಿಕೊಂಡಿದ್ದರು, ಇದರಿಂದಾಗಿ ಸ್ಕ್ವೇರ್ ದಿ ಒನ್ ಜೊತೆಗಿನ ಸುಧೀರ್ಘ ನಾಲ್ಕು ವರ್ಷಗಳ ವ್ಯವಹಾರ ಸಂಬಂಧ ಕೊನೆಗೊಂಡಿತ್ತು.ಸದ್ಯ ಬಾಕಿ ಹಣವನ್ನು ಪಾವತಿಸದಕ್ಕಾಗಿ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ ಎಂದು ಮೂಲಗಳು ತಿಳಿಸಿವೆ.

ಇಂತಹ ಸಾಕಷ್ಟು ಪ್ರಕರಣಗಳು ನ್ಯಾಯಾಲಯದವರೆಗೂ ಹೋಗದೆ, ಖಾಸಗಿಯಾಗಿ ಪರಿಹಾರವಾಗಿದ್ದು, ಈ ಪ್ರಕರಣದಲ್ಲಿ ನಿತೀಶ್ ಹಣವನ್ನು ಪಾವತಿಸಲು ನಿರಾಕರಿಸಿದ್ದು ಮತ್ತು ಒಪ್ಪಂದಗಳನ್ನು ತಾವೇ ಪಡೆದುಕೊಂಡಿರುವುದಾಗಿ ಹೇಳಿಕೊಂಡಿರುವುದರಿಂದ ಪರಿಸ್ಥಿತಿ ಈ ಹಂತಕ್ಕೆ ತಲುಪಲು ಕಾರಣ ಎಂದು ವರದಿಯಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net