

ಪಡುಬಿದ್ರಿ: ಬಂಟರ ಭವನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಗುರು ನಿತ್ಯಾನಂದ ಶ್ರೀಗಳ ಐದನೇ ಪ್ರತಿಷ್ಠಾಪನೋತ್ಸವ ಪಡುಬಿದ್ರಿಯ ಮುರಳೀಧರ ಆಚಾರ್ಯ ನೇತೃತ್ವದಲ್ಲಿ ಬುಧವಾರ ನೆರವೇರಿತು.
ಬಂಟರ ಭವನದ ಬಳಿಯ ನಾಗಬನದಲ್ಲಿ ತನು, ತಂಬಿಲ ಸೇವೆ, ಗಣಪತಿ ಹೋಮ, ಶ್ರೀ ಗುರು ನಿತ್ಯಾನಂದ ಶ್ರೀಗಳಿಗೆ ಪಂಚಾಮೃತ ಅಭಿಷೇಕ ಪುರಸ್ಸರ ಪೂಜೆ, ಬಂಟ ಮಹಿಳಾ ವಿಭಾಗದ ಆನಂದ ಬೈರವಿ ಭಜನೆ ತಂಡದಿಂದ ಭಜನೆ ಸೇವೆ ಸಂಪನ್ನಗೊಂಡಿತು.
ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ವೈ. ಶಶಿಧರ ಶೆಟ್ಟಿ ಎರ್ಮಾಳು, ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಬಂಟರ ಯುವ ವಿಭಾಗದ ನವೀನ್ ಎನ್.ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಎರ್ಮಾಳು, ರವೀಂದ್ರನಾಥ ಜಿ.ಹೆಗ್ಡೆ, ಸುರೇಶ್ ಶೆಟ್ಟಿ ಗುಂಡ್ಲಾಡಿ, ವೈ.ಗೋಪಾಲ ಶೆಟ್ಟಿ, ಮಾಧವ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಧನಪಾಲ್ ಶೆಟ್ಟಿ, ಹರೀಶ್ ಶೆಟ್ಟಿ ಪಾದೆಬೆಟ್ಟು ಮತ್ತಿತರರಿದ್ದರು.