ನಿರಂಜನರ ಬದುಕು- ಸಾಹಿತ್ಯ ಚಿಂತನೆ ವಿಚಾರ ಸಂಕಿರಣ

WhatsApp Image 2025-02-06 at 12.38.29 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ನಗರದ ನಿರಂಜನ ವಿಚಾರ ವೇದಿಕೆ ಸಹಯೋಗದೊಂದಿಗೆ ನಿರಂಜನರ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಫೆ. 9ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ರಂಗಾಯಣ ಸಭಾಂಗಣದಲ್ಲಿ `ನಿರಂಜನರ ಬದುಕು- ಸಾಹಿತ್ಯ ಒಂದು ಚಿಂತನೆ' ವಿಷಯ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಸಿ. ವೀರಣ್ಣ ಉದ್ಘಾಟಿಸುವರು. ರಾಜೇಂದ್ರ ಚೆನ್ನಿ ಅತಿಥಿಯಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 12ರಿಂದ `ನಿರಂಜನ ಮತ್ತು ಪ್ರಾದೇಶಿಕತೆ' ವಿಷಯ ಕುರಿತು ಡಾ. ರಾಜೇಂದ್ರ ಚೆನ್ನಿ, `ಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನ' ವಿಷಯ ಕುರಿತು ಡಾ. ಬಿ.ಆರ್. ಮಂಜುನಾಥ, `ಪ್ರಗತಿಪರ ಚಳವಳಿಗಳ ಒಡನಾಟ' ವಿಷಯ ಕುರಿತು ಡಾ. ರಂಗನಾಥ ಕಂಟನಕುAಟೆ ವಿಷಯ ಮಂಡಿಸುವರು. ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಉಪಸ್ಥಿತರಿರುವರು ಎಂದರು.

ಮಧ್ಯಾಹ್ನ 2.30ರಿಂದ ನಿರಂಜನರ ಕಾದಂಬರಿಗಳು ಕುರಿತು ಡಾ. ಎಚ್.ಬಿ. ಕೋಲ್ಕಾರ್, ನಿರಂಜನರ ಕಥೆಗಳು ಕುರಿತು ಡಾ. ಅನಸೂಯಾ ಕಾಂಬಳೆ, ನಿರಂಜನರ ಪತ್ರಿಕೆ ಮತ್ತು ಇತರ ಬರಹಗಳು ಕುರಿತು ಡಿ. ಉಮಾಪತಿ ಮಾತನಾಡುವರು. ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದೆ. ಹಿರಿಯ ಪತ್ರಕರ್ತ ಸನತ್‌ಕುಮಾರ್ ಬೆಳಗಲಿ ಸಮಾರೋಪ ನುಡಿಗಳನ್ನಾಡುವರು. ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸುವರು. ಡಾ. ಸಿ.ಬಿ. ಐನಳ್ಳಿ, ಡಾ. ವೆಂಕನಗೌಡ ಪಾಟೀಲ ಉಪಸ್ಥಿತರಿರುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net