More

    ಕನ್ನಡ ತೆಲುಗಿನಲ್ಲಿ ನಿಖಿಲ್-ಅರ್ಜುನ್ ಕಾಂಬಿನೇಷನ್

    ಬೆಂಗಳೂರು: ದ್ಯ ಸಿನಿಮಾ ಕೆಲಸಗಳನ್ನು ಬದಿಗಿಟ್ಟು ಮದುವೆ ತಯಾರಿಯಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಬಿಜಿಯಾಗಿದ್ದಾರೆ. ತೆಲುಗಿನಲ್ಲಿ ವಿಜಯ್ಕುಮಾರ್ ಕೊಂಡ ನಿರ್ದೇಶನದ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದರಿಂದ ಅದರಿಂದ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಇತ್ತ ಅವರ ಮುಂದಿನ ಸಿನಿಮಾಗಳ ಕೆಲಸಗಳೂ ಚುರುಕು ಪಡೆದು ಕೊಂಡಿವೆ. ಆ ಪೈಕಿ ಇನ್ನೂ ಶೀರ್ಷಿಕೆ ಅಂತಿಮವಾಗದ ನಿಖಿಲ್ ಮತ್ತು ನಿರ್ದೇಶಕ ಎ.ಪಿ. ಅರ್ಜುನ್ ಸಿನಿಮಾ ಸಹ ಒಂದು. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಸಿನಿಮಾ ಸದ್ಯ ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಇದೇ ತಿಂಗಳಾಂತ್ಯಕ್ಕೆ ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡು, ಲೊಕೇಷನ್ ಹಂಟ್​ಗೆ ಇಳಿಯಲಿದೆ. ಅದಾದ ಬಳಿಕ ಅಂದರೆ ಜೂನ್​ನಲ್ಲಿ ಸಿನಿಮಾ ಶೂಟಿಂಗ್​ಗೆ ನಿರ್ದೇಶಕ ಅರ್ಜುನ್ ಚಾಲನೆ ನೀಡಲಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ

    ‘ಎನ್​ಕೆ ಎಂಟರ್​ಟೇನ್​ವೆುಂಟ್ಸ್’ ಬ್ಯಾನರ್​ನಲ್ಲಿ ಸ್ವತಃ ನಿಖಿಲ್ ಕುಮಾರಸ್ವಾಮಿ ಬಂಡವಾಳ ಹೂಡುತ್ತಿದ್ದು, ಕನ್ನಡದ ಜತೆಗೆ ತೆಲುಗಿನಲ್ಲೂ ಸಿದ್ಧವಾಗಲಿದೆಯಂತೆ. ತಾರಾಗಣದ ಆಯ್ಕೆ ವಿಚಾರದಲ್ಲಿಯೂ ಶ್ರೀಮಂತಿಕೆ ಕಾಯ್ದುಕೊಳ್ಳುವ ಲೆಕ್ಕಾಚಾರ ತಂಡಕ್ಕಿದ್ದು, ಸ್ಟಾರ್ ಕಲಾವಿದರನ್ನೇ ಆಯ್ದುಕೊಳ್ಳಲು ಪ್ಲಾ್ಯನ್ ರೂಪಿಸಿದ್ದಾರೆ ಅರ್ಜುನ್. ಸದ್ಯಕ್ಕೆ ಶೀರ್ಷಿಕೆ ಅಂತಿಮ ಮಾಡುವ ಕೆಲಸ ನಡೆದಿದ್ದು, ಅದರ ಜತೆಯಲ್ಲಿ ‘ಅದ್ದೂರಿ ಲವರ್’ ಸಿನಿಮಾ ನಿರ್ವಣದಲ್ಲೂ ಎ.ಪಿ. ಅರ್ಜುನ್ ತೊಡಗಿಸಿಕೊಂಡಿದ್ದಾರೆ. ಯುಗಾದಿಗೆ ಆ ಸಿನಿಮಾ ಶುರುವಾಗಲಿದೆ.

    ಸದ್ಯಕ್ಕಿಲ್ಲ ಕೃಷ್ಣ ಜತೆ ನಿಖಿಲ್ ಸಿನಿಮಾ!

    ಕಳೆದ ವರ್ಷ ‘ಪೈಲ್ವಾನ್’ ಸಿನಿಮಾದ ನಿರ್ದೇಶನ ಮತ್ತು ನಿರ್ವಣದ ಮೂಲಕ ಸದ್ದು ಮಾಡಿದ್ದ ನಿರ್ದೇಶಕ ಕೃಷ್ಣ, ಅದಕ್ಕಿಂತ ದೊಡ್ಡ ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತಿರುವ ವಿಚಾರ. ನಿಖಿಲ್ ಕುಮಾರಸ್ವಾಮಿ ಅವರಿಗೆ ಸಿನಿಮಾ ನಿರ್ದೇಶನ ಮಾಡುವುದು ಅಧಿಕೃತವಾಗಿತ್ತು.

    ಸದ್ಯ ಆ ಪ್ರಾಜೆಕ್ಟ್ ಮುಂದೂಡಿಕೆ ಆಗಿದೆ. ಅಂದರೆ, ಸದ್ಯ ತೆಲುಗಿನಲ್ಲಿ ತಯಾರಾಗುತ್ತಿರುವ ಸಿನಿಮಾದ ಅರ್ಧ ಶೂಟಿಂಗ್ ಮುಗಿಸಿರುವ ನಿಖಿಲ್, ಆ ಚಿತ್ರದ ಬಳಿಕ ಎ.ಪಿ. ಅರ್ಜುನ್ ಜತೆ ಕೈ ಜೋಡಿಸಲಿದ್ದಾರೆ. ಅದಾದ ಬಳಿಕ ಕೃಷ್ಣ ಸಿನಿಮಾದಲ್ಲಿ ನಟಿಸಲಿದ್ದಾರೆ. ಹಾಗಾಗಿ ಇತ್ತ ಬೇರೆ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಕೃಷ್ಣ, ನಿರ್ದೇಶನದತ್ತ ಚಿತ್ತ ಹರಿಸಿದ್ದಾರೆ. ಅಷ್ಟೇ ಅಲ್ಲ ಎರಡು ಸಿನಿಮಾ ನಿರ್ವಣಕ್ಕೂ ಕೈ ಹಾಕಿರುವ ಅವರು, ಹೊಸ ನಿರ್ದೇಶಕರನ್ನು ಪರಿಚಯಿಸುವ ತಯಾರಿಯಲ್ಲಿದ್ದಾರೆ.

    ಎಲ್ಲ ಅಂದುಕೊಂಡಂತೆ ಆದರೆ, ಇನ್ನು 10 ದಿನಗಳಲ್ಲೇ ಸ್ಕ್ರಿಪ್ಟ್ ಪೂಜೆ ಮುಗಿಸಿಕೊಂಡು, ಜೂನ್ ತಿಂಗಳಲ್ಲಿ ಶೂಟಿಂಗ್ ಶುರುಮಾಡಲಿದ್ದೇವೆ. ಕನ್ನಡದ ಜತೆಗೆ ತೆಲುಗಿನಲ್ಲೂ ಸಿನಿಮಾ ಸಿದ್ಧವಾಗಲಿದೆ.

    | ಎ.ಪಿ. ಅರ್ಜುನ್ ನಿರ್ದೇಶಕ

    ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ಈಗ ಮೊದಲಿನಷ್ಟು ಸುಲಭವಲ್ಲ…ಸಿಎಂ ಕಚೇರಿಯ ಕಟ್ಟುನಿಟ್ಟಿನ ಸೂಚನೆಗಳಿವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts