

ನವದೆಹಲಿ: ಡೆಡ್ಲಿ ಕರೊನಾ ವೈರಸ್ ಭೀತಿಗೆ ಭಯಗೊಂಡಿರುವ ಸ್ಪೋರ್ಟ್ಸ್ ಕ್ಷೇತ್ರದ ದೈತ್ಯ ಕಂಪನಿ ನೈಕ್ ಜಾಗತಿಕವಾಗಿರುವ ತನ್ನ ಮಳಿಗೆಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ಸೋಂಕು ಮತ್ತಷ್ಟು ಹರಡದಂತೆ ತಡೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ನೈಕ್ ಕಂಪನಿ ಅಧಿಕೃತ ಹೇಳಿಕೆಯನ್ನು ಭಾನುವಾರ ಬಿಡುಗಡೆ ಮಾಡಿದೆ.
ನಮ್ಮ ತಂಡ ಹಾಗೂ ಗ್ರಾಹಕರ ಹಿತರಕ್ಷಣವೇ ನಮ್ಮ ಮೊದಲ ಆದ್ಯತೆಯಾಗಿದೆ. ಹೀಗಾಗಿ ಯುನೈಟೆಡ್ ನೇಷನ್ ಸೇರಿದಂತೆ ವಿಶ್ವದೆಲ್ಲೆಡೆ ಇರುವ ನಮ್ಮ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಿದ್ದೇವೆ. ಇದಲ್ಲದೆ, ಮನೆಯಿಂದಲೇ ಕೆಲಸ ಮಾಡುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ನಮ್ಮ ತಂಡದ ರಕ್ಷಣೆಯ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎದು ಕಂಪನಿ ಹೇಳಿದೆ.
ವರದಿಯ ಪ್ರಕಾರ ಮಾರ್ಚ್ 27ರವರೆಗೆ ನೈಕ್ ಕಂಪನಿ ಮುಚ್ಚಲಿದೆ. ಇದಕ್ಕೂ ಮುನ್ನ ಟೆಕ್ ದೈತ್ಯ ಆ್ಯಪಲ್ ಕಂಪನಿ ಗ್ರೇಟರ್ ಚೀನಾ ಹೊರತುಪಡಿಸಿ ವಿಶ್ವಾದ್ಯಂತ ಇರುವ ಸ್ಟೋರ್ಗಳನ್ನು ಮುಚ್ಚುವುದಾಗಿ ತಿಳಿಸಿದೆ. (ಏಜೆನ್ಸೀಸ್)