Bigg Boss-18: ಪ್ರೀಮಿಯರ್‌ಗೆ ಮುನ್ನ ಶಾಕ್.. ಸೇರದಿರುವ ಬಗ್ಗೆ ಮೌನ ಮುರಿದು 'ನನ್ನನ್ನು ದೂಷಿಸಬೇಡಿ' ಎಂದ ನಿಯಾ ಶರ್ಮಾ!

Bigg Boss-18
Published on

ನವದೆಹಲಿ: ಜನಪ್ರಿಯ ಮತ್ತು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ 18(Bigg Boss-18) ಕೆಲವು ಸಮಯದಿಂದ ಸುದ್ದಿಯಲ್ಲಿದೆ. ಕಾರ್ಯಕ್ರಮಕ್ಕೆ ಕಿರುತೆರೆ ನಟಿಯಬ್ಬಳ ಆಗಮನದ ಬಗ್ಗೆ ಚರ್ಚೆ ನಡೆದಿದ್ದು, ಆಕೆಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿತ್ತು. ಆದರೆ, ಈಗ ಆಕೆ ಬಿಗ್​ ಮನೆ ಸೇರಲು ಬರಲು ನಿರಾಕರಿಸಿದ್ದಾಳೆ. ಆಕೆ ಬೇರಾರು ಅಲ್ಲ, ನಟಿ ನಿಯಾ ಶರ್ಮಾ.

ನಿಯಾ ಬಿಗ್ ಬಾಸ್ 18 ರ ಭಾಗವಾಗಲಿದ್ದಾರೆ ಎಂಬ ಚರ್ಚೆ ನಡೆದಿತ್ತು. ಈ ಸುದ್ದಿ ಬಂದಾಗಿನಿಂದ ಅವರ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇರಲಿಲ್ಲ. ಅಷ್ಟೇ ಅಲ್ಲ ಖತ್ರೋನ್ ಕೆ ಕಿಲಾಡಿ 14 ರ ಗ್ರ್ಯಾಂಡ್ ಫಿನಾಲೆಯಲ್ಲಿ ರೋಹಿತ್ ಶೆಟ್ಟಿ ನಿಯಾ ಬಿಗ್ ಬಾಸ್ ಗೆ ಹೋಗುತ್ತಿರುವ ಬಗ್ಗೆ ಸುಳಿವು ನೀಡಿದ್ದರು. ಆದರೆ ಗ್ರ್ಯಾಂಡ್ ಪ್ರೀಮಿಯರ್‌ಗೆ ಮುನ್ನ ನಿಯಾ ನಾ ಒಲ್ಲೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಬಿಗ್ ಬಾಸ್ 18 ರ ಭಾಗವಾಗುವುದಿಲ್ಲ ಎಂದು ನಿಯಾ ಶರ್ಮಾ ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. "ಇದಕ್ಕೆ ನನ್ನನ್ನು ದೂಷಿಸಬೇಡಿ" ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ 18 ಅಕ್ಟೋಬರ್ 6 ರಿಂದ ಪ್ರಾರಂಭವಾಗಿದ್ದು, ಇದರಲ್ಲಿ ವಿವಿಯನ್ ದ್ಸೇನಾ, ಚಾಹತ್ ಪಾಂಡೆ, ಶೆಹಜಾದಾ ಧಾಮಿ, ಶಿಲ್ಪಾ ಶಿರೋಡ್ಕರ್, ತಜೀಂದರ್ ಸಿಂಗ್ ಬಗ್ಗಾ, ಆಲಿಸ್ ಕೌಶಿಕ್, ನೈರಾ ಬ್ಯಾನರ್ಜಿ, ಅರ್ಫೀನ್ ಖಾನ್ ಮತ್ತು ಅವರ ಪತ್ನಿ ಸಾರಾ ಸೇರಿದಂತೆ ಅನೇಕ ಪ್ರಸಿದ್ಧ ತಾರೆಯರು ಭಾಗವಹಿಸಿದ್ದಾರೆ. ಎಂದಿನಂತೆ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net