ಗೋಲ್ಡ್ ಸ್ಮಗ್ಲಿಂಗ್ ಕೇಸ್ ಎಡರಂಗ ಸರ್ಕಾರಕ್ಕೆ ಭಾರಿ ಮುಖಭಂಗ

KT Jaleel
Published on

ಕೊಚ್ಚಿ: ಭಾರಿ ಸಂಚಲನ ಮೂಡಿಸಿರುವ ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ ಎಡರಂಗ ಸರ್ಕಾರಕ್ಕೆ ಭಾರಿ ಮುಖಭಂಗ ಉಂಟಾಗಿದೆ. ಸಚಿವ ಕೆ.ಟಿ.ಜಲೀಲ್ ವಿರುದ್ಧ ಇರುವಂಥದ್ದು ಆಧಾರ ರಹಿತ ಆರೋಪ ಎಂದೂ, ಅವರು ರಾಜೀನಾಮೆ ನೀಡಬೇಕಾಗಿಲ್ಲ ಎಂದೂ ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಮುಜುಗರ ಉಂಟಾಗುವ ಸನ್ನಿವೇಶ ಎದುರಾಗಿದೆ.

ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದ ಜಲೀಲ್, ಇಂದು ಬೆಳ್ಳಂಬೆಳಗ್ಗೆಯೇ ಕೊಚ್ಚಿಯಲ್ಲಿರುವ ಎನ್​ಐಎ ಕಚೇರಿಗೆ ವಿಚಾರಣೆ ಎದುರಿಸಲು ತೆರಳಿದ್ದಾರೆ. ಖಾಸಗಿ ಕಾರಿನಲ್ಲಿ ಬೆಳಗ್ಗೆ 6 ಗಂಟೆಗೆ ಆಗಮಿಸಿದ ಅವರ ವಿಚಾರಣೆ ಪ್ರಗತಿಯಲ್ಲಿದೆ.

ಕೇರಳದ ಆಡಳಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಚಿವರೊಬ್ಬರು ಈ ರೀತಿಯಾಗಿ ಎನ್​ಐಎ, ಇಡಿ ವಿಚಾರಣೆ ಎದುರಿಸುತ್ತಿರುವಂಥದ್ದು. ಇದಕ್ಕೂ ಹೊಣೆಗಾರಿಕೆಯುಳ್ಳ ಸ್ಥಾನದಲ್ಲಿದ್ದುಕೊಂಡು ಕೇಂದ್ರೀಯ ತನಿಖಾ ಸಂಸ್ಥೆಯ ವಿಚಾರಣೆ ಎದುರಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net